ಗಜಲ್

ಗಜಲ್..

ಅಮ್ಮ..ನಿನ್ನ ತನು-ಮನದ ಉಸಿರಿನ ಒಂದಂಶದವನು ಕಣೇ ನಾನು ನಿನ್ನನ್ನು ಹೆರಿಗೆಯ ಯಮಯಾತನೆಗೆ ನೂಕಿದವನು ಕಣೇ ನಾನು

ಅಮ್ಮ.. ನಿನ್ನುದರದ ಕರುಳ ಬಳ್ಳಿಯ ಪ್ರತಿಬಿಂಬದ ಕೂಸು ನಾನು
ದೈಹಿಕವಾಗಿ ನಿನ್ನ ದುರ್ಬಲಳನ್ನಾಗಿ ಮಾಡಿದವನು ಕಣೇ ನಾನು

ಅಮ್ಮ..ಬಡತನ ಬವಣೆಯಲಿ ರೋಗ-ರುಜಿನುಗಳಿಗೆ ತುತ್ತಾಗಿಸಿದೆ
ನೋವಿನ ಸರಮಾಲೆಯನು ನಿನಗೆ ತೊಡಿಸಿದವನು ಕಣೇ ನಾನು

ಅಮ್ಮ.. ತಿನ್ನೋಕೆ ಸತಾಯಿಸುತ ನಿನ್ನ ಜೀವ ತಿಂದವನು ನಾನು
ನಿನ್ನ ಹಸಿವನ್ನು ಮರೆಸಿ ಉಪವಾಸ ಕೆಡವಿದವನು ಕಣೇ ನಾನು

ಅಮ್ಮ… ನಿನಗೆ ಕೂಡಿಸಿ ಸೇವೆ ಮಾಡಲಾಗದ ಪಾಪಿ ಈ ಮಲ್ಲಿ
ಇಂದಿಗೂ ನಿನ್ನ ಅಡುಗೆಗಾಗಿಯೇ ಕಾಯುತ್ತಿರುವವನು ಕಣೇ ನಾನು

*-✍️ರತ್ನರಾಯಮಲ್ಲ

Don`t copy text!