ಅವ್ವ,,,,
ನಿನ್ನ ಮಮತೆ ಪ್ರೀತಿ ಒಲವ ಧಾರೆ
ಮಳೆಯ ಹನಿ ಸೇರಿ ನದಿ ಸಾಗರದಷ್ಟು,
ನಿನ್ನ ಜ್ಞಾನ ಹಿತವಚನದ ಧಾರೆ
ಚುಕ್ಕಿ ಚುಕ್ಕಿ ಎಷ್ಟೋ ಚುಕ್ಕಿ ಎಲ್ಲ ಸೇರಿದ
ಚಂದಿರನ ಬೆಳದಿಂಗಳಷ್ಟು,
ನೀನು ಕೊಡುವ ಧೈರ್ಯದ ಮಾತು
ಮೇರುಗಿರಿ ಪರ್ವತ ಬೆಟ್ಟದಷ್ಟು,
ನಿನ್ನ ಕರುಣೆಯ ಕೈತುತ್ತು
ಸವಿ ಸವಿ ಅಮೃತದಷ್ಟು,
ನಿನ್ನ ಕಷ್ಟಗಳನೆಲ್ಲ ಬದಿಗಿಟ್ಟು
ಹಾಡುವ ಲಾಲಿಪದದ ಇಂಪಿನ ಚೆಂದ ಅದೆಷ್ಟು,
ನಿನ್ನ ನಲಿವೇ ನಮ್ಮ ನಲಿವು
ನಿನ್ನ ಸೆರಗಿನ ಅಂಚಲಿದೆ ಸ್ವರ್ಗ ಸುಖ ತಾಯೇ,
ಅಷ್ಟು ಇಷ್ಟು ಎಷ್ಟೋ ನಿಲುಕದಷ್ಟು,
ನಿನ್ನ ವರ್ಣನೆಗೆ ಪದಗಳೇ ಇಲ್ಲ ತಾಯೇ,
ಈ ಜೀವ ಜೀವನ ಕೊಟ್ಟ ನಿಮಗೆ ಶರಣು ಶರಣು ತಾಯೇ,
–ಸುನಿತಾ. ಎಸ್. ಅಂಗಡಿ, ಇಲಕಲ್ಲ