ಹರಸು ಅಮ್ಮ

 

ಹರಸು ಅಮ್ಮ

ಕರುಳ ಬಳ್ಳಿಯ ಬಂಧವು
ಯಾರು ಅಳಿಸಲಾಗದ ಬಾಂಧವ್ಯವು
ಚಿರಕಾಲ ಇರಲಿ
ಆಶೀರ್ವಾದವು
ಹರುಸು ನಮ್ಮನ್ನು ಅನುದಿನವು..

ನಮ್ಮ ಕಷ್ಟಕ್ಕೆ ಸ್ಪಂದಿಸುವ
ನಮ್ಮ ಇಷ್ಟಕ್ಕೆ ಪ್ರೀತಿಸುವ..
ಮಮತೆಯ ಮಡಿಲು
ವಾತ್ಸಲ್ಯ ದ ಕಡಲು..

ನಿನ್ನಂತೆ ಯಾರಿಲ್ಲ
ಸ್ವಾರ್ಥ ವಂತೂ ಮೊದಲೆ ಇಲ್ಲ
ಬೆಲೆ ಕಟ್ಟಲಾಗದ ವಸ್ತುವಲ್ಲ
ನಿನ್ನ ಪ್ರೀತಿಗೆ ಸಮಾನರಿಲ್ಲ

ಲಾಲಿಸಿ ಪೊರೆಯುವಳು
ಪೋಷಿಸಿ ಬೆಳೆಸುವವಳು
ಮಕ್ಕಳಿಗೆ ದೇವತೆಯಾಗಿರುವಳು
ದೇವರ ಪ್ರತಿರೂಪವೇ
ಅಮ್ಮ ನಾಗಿರುವಳು….

ಶ್ವೇತಾ ‌ಜೆ

Don`t copy text!