ಅಮ್ಮ
ಅಮ್ಮ ಎನ್ನುವ ಅಮೃತ ವಾಣಿ| ನುಡಿದು ಬೆಳದವರೆ ನಾವೆಲ್ಲ|
ಅಮ್ಮ ಹೊರತುಜಗದಲ್ಲಿ ಯಾವ ದೇವರಿಲ್ಲ|
ಅಮ್ಮವೆ|
ನಮ್ಮ ಸರ್ವಸಂಪತ್ತು|
ಅಮ್ಮವೆ ನಮ್ಮ ಕಲ್ಪತರು| ಎನ್ನುವುದು ಹುಸಿಯಿಲ್ಲ| ಓ…..ಅಮ್ಮ…..ಓ…ಅಮ್ಮ….
ಪ್ರೇಮ ಹೊಳೆಯು ನೀ|
ಒಲವಿನ ಕೊಳವು ನೀ|
ಕರುಣ ಸಾಗರ ನೀ|
ಓ….ಅಮ್ಮ..ಓ..ಅಮ್ಮ|| ಪ||
ಎಂತಹ ಸೌಭಾಗ್ಯ ನನ್ನದಮ್ಮ|
ನಾನಿನ್ನ ಉದರದಲ್ಲಿ ಜನಸಿ ಬಂದೆನಮ್ಮ|
ನಿನ್ನಯ ಪ್ರೇಮದ ಮಡಿಲಲ್ಲಿ ಮಿಂದು|
ಧನ್ಯನಾದೆ ನಿಂದು|
ನಿನ್ನಪ್ರೇಮಾಕೆ ಅಂತ್ಯವಿಲ್ಲಮ್ಮ|
ಓ…ಅಮ್ಮ..ಓ..ಅಮ್ಮ ||1||
ಅಮೃತ ಸವಿಹಾಲು ನೀ ಎನಗುಣಸಿ|
ಮುತ್ತಿನ ತೊಟ್ಟಿಲಲ್ಲಿ ಎನ್ನನು ಮಲಗಿಸಿ|
ಕೋಗಿಲೆ ಸ್ವದಲ್ಲಿ ಜೋಗಳ ಹಾಡಿ|
ಹರುಷದಿ ಎನ್ನನು ಕಾಪಾಡಿ| ನಿನ್ನ ಪ್ರೇಮಾಕ್ಕೆಅಂತ್ಯ ವಿಲ್ಲಮ್ಮ|
ಓ…ಅಮ್ಮ…ಓ..ಅಮ್ಮ..||2||
ನೂರಾರು ಯುಗಗಳು ಕಳೆದು ಹೋದರು|
ಅಮ್ಮನ ಉಪಕಾರ ತೀರಿಸಲಾಗು|
ಅಮ್ಮನ ಪ್ರೇಮದ ಸಾಗರದಲ್ಲಿ|
ಮಿಂದವರೆ ನಾವೆಲ್ಲ|
ಅಮ್ಮಯೆಂದೊಡನೆ|
ಹೃದಯ ಅರಳುವದು|
ಮನವು ಕರಗುವುದು| ಓ…ಅಮ್ಮ…ಓ..ಅಮ್ಮ ||3||
ಶಂಭುಲಿಂಗ ವಾಲ್ದೊಡ್ಡಿ.ಬೀದರ್
9448186652.