ಬಿಸಿಲಿನ ತಾಪಕ್ಕೆ ಮಹಿಳೆ ಅಸ್ವಸ್ಥ, ಶಾಸಕ ಬಸನಗೌಡ ತುರ್ವಿಹಾಳರಿಂದ ಆರೈಕೆ


e-ಸುದ್ದಿ, ಮಸ್ಕಿ
ಬಿಸಿಲಿನ ತಾಪ ತಾಳಲಾರದೆ ಬೈಕ್‍ನಿಂದ ಕೆಳಗೆ ಬಿದ್ದ ಮಹಿಳೆಯನ್ನು ಶಾಸಕ ಬಸನಗೌಡ ತುರ್ವಿಹಾಳ ಹಾರೈಕೆ ಮಾಡಿದ ಘಟನೆ ಭಾನುವಾರ ಪಟ್ಟಣದಲ್ಲಿ ನಡೆಯಿತು.
ಬೈಕ್ ಸವಾರನ ಹಿಂಬದಿ ಕುಳಿತಿದ್ದ ಮಹಿಳೆ ಕೆಳಗೆ ಬಿಳುತ್ತಿದ್ದಂತೆ ಬೈಕ್ ಹಿಂದಿಯೇ ತನ್ನ ಇನ್ನೊವಾ ಗಾಡಿ ಹೊರಟಿದ್ದ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳÀ ಕೂಡಲೇ ತನ್ನ ವಾಹನದಿಂದ ಕೆಳಗೆ ಇಳಿದು ರಸ್ತೆ ಬದಿಯಲ್ಲಿ ಬಿಸಿಲಿನ ತಾಪದಿಂದ ಅಸ್ವಸ್ಥಗೊಂಡು ಬಿದ್ದಿದ್ದ ಮಹಿಳೆಗೆ ನೀರು ಕುಡಿಸಿ ಹಾರೈಕೆ ಮಾಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಮಾನವಿಯತೆ ಮೆರೆದ ಘಟನೆ ನಡೆಯಿತು.

Don`t copy text!