ಮಸ್ಕಿಯಲ್ಲಿ ಭಾನುವಾರದ ಸಂತೆಯಲ್ಲಿ ಮುಗಿಬಿದ್ದ ಜನ!,

??????

e-ಸುದ್ದಿ, ಮಸ್ಕಿ
ಮಸ್ಕಿ ಪಟ್ಟಣದಲ್ಲಿ ಭಾನುವಾರದ ಸಂತೆ. ಅಲ್ಲದೇ ಸೋಮವಾರದಿಂದ ಸಂಪೂರ್ಣ ಲಾಕ್‍ಡೌನ್ ಇರಲಿದೆ ಎನ್ನುವ ಮಾಹಿತಿ ಅರಿತು ಇಲ್ಲಿನ ಸಂತೆ ಮಾರುಕಟ್ಟೆಯಲ್ಲಿ ಜನಜಂಗುಳಿಯೇ ಸೇರಿದ್ದರು.
ಸಿಂಧನೂರು-ಮಸ್ಕಿ ಹೆದ್ದಾರಿಯಿಂದ ಹಿಡಿದು ಹಳೆಪುರಸಭೆ ಕಟ್ಟಡದ ಮುಂಭಾಗ, ಹಳೆಬಜಾರ್ ಮಾರ್ಗ ಪೂರ್ಣವೂ ಭಾನುವಾರ ಬೆಳಗ್ಗೆಯಿಂದಲೇ ರಶ್ ಆಗಿತ್ತು. ತರಕಾರಿ, ಕಿರಾಣಿ ಸಾಮಗ್ರಿ, ಸ್ಟೇಷನರಿ ಸಾಮಾನು ಸೇರಿ ಎಲ್ಲವನ್ನೂ ಖರೀದಿ ಮಾಡಲು ಜನಜಂಗುಳಿಯೇ ಸೇರಿತ್ತು. ಕೋವಿಡ್-19 ನಿಯಮದಂತೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಪುರಸಭೆ ಸಿಬ್ಬಂದಿ ಕೂಗಿ-ಕೂಗಿ ಹೇಳಿದರು ಜನ ಯಾವುದರ ಪರಿವೆ ಇಲ್ಲದೇ ನೂರಾರು ಸಂಖ್ಯೆಯಲ್ಲಿ ಸೇರಿದ್ದರು.
ಈ ಹಿಂದೆ ಸಂತೆ ನಡೆಯುತ್ತಿದ್ದ ಮಾರುಕಟ್ಟೆ ಪೂರ್ಣ ಸ್ಥಗಿತವಾಗಿದೆ. ಖಲೀಲ್ ವೃತ್ತದ ಬಳಿ ಹಳೆಬಜಾರ್ ಮಾರ್ಗದಲ್ಲಿಯೇ ಸಂತೆ ನಿಗದಿ ಮಾಡಿದ್ದು, ಈ ಸ್ಥಳದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನ ಸೇರಿದ್ದರು. ಬೆಳಗ್ಗೆ 6 ಗಂಟೆಯಿಂದ 11 ಗಂಟೆಯವರೆಗೂ ಜನದಟ್ಟಣೆ ಹೆಚ್ಚಿರುವುದು ಕಂಡು ಬಂತು. ಜನರಿಗೆ ಎಷ್ಡು ಹೇಳಿದರೂ ಕೇಳದಿದ್ದಾಗ ಇದರಿಂದ ಕೊಪಗೊಂಡ ಪಿಎಸ್‍ಐ ಸಿದ್ದರಾಮ ಅವರು ಬೇಕಾಬಿಟ್ಟಿಯಾಗಿ ಓಡಾಟ ನಡೆಸುತ್ತಿದ್ದವರಿಗೆ ಲಾಠಿ ರುಚಿ ತೊರಿಸಿದರು. ಇದರಿಂದ ಜನರು ಮಾರುಕಟ್ಟೆಯಿಂದ ಕಾಲ್ಕಿತ್ತರು.

Don`t copy text!