ಹುಡುಕುತ್ತಿರುವೆ

ಹುಡುಕುತ್ತಿರುವೆ

ಹುಡುಕುತ್ತಿರುವೆ
ಗೆಳೆಯರೇ
ಕಳೆದು ಹೋದ ನನ್ನ
ಭಾವಗಳ ಬುತ್ತಿ
ಅವಳ ಜೊತೆ
ಲಲ್ಲೆ ಹೊಡೆದು
ಮರ ಸುತ್ತಿ
ಎಣಿಸುತ್ತಿರುವೆ
ಕಾಡಿನಲ್ಲಿ ತೋಟದಲಿ
ತಂಪಿನಲಿ ಕೊಂಬೆ
ರೆಂಬೆಯ ಮುಟ್ಟಿ
ತೇಲುತ್ತಾ ಈಜುತ್ತಾ
ಕಡಲ ಅಲೆಯಲಿ
ಮಿಂದ ನೆನಪು
ಹುಡುಕುತ್ತಿರುವೆ
ಮರುಳ ಮೇಲೆ
ಬರೆದ ನಿನ್ನ ಹೆಸರು.
ನಿನ್ನೊಂದಿಗೆ ಹೆಜ್ಜೆ ಹಾಕಿ
ಸರಸ ಸಲ್ಲಾಪದ
ಮಾತುಗಳ
ನುಡಿ ಚುಟುಕುಗಳ
ಹುಡುಕುತ್ತಿರುವೆ
ಶಬ್ದ ಕೋಶದಿ
ಮಸೂರ ದರ್ಪಣ ಬಳಸಿ
ನಾವು ಕುಂತ ಜಾಗದಲ್ಲಿ
ಇಲ್ಲ ಈಗ ತೋಟ
ಕಿಕ್ಕಿರಿದ ಮಕ್ಕಳಾಟ
ಹಸಿರು ಹುಲ್ಲಿನ ಮೇಲೆ
ನಿನ್ನ ಬಿಂಬ
ಹುಡುಕುತ್ತಿರುವೆ
ಒಬ್ಬನೆ ಒಳಗೊಳಗೆ
ಮೌನದಿ ನಕ್ಕು
ಅಕ್ಕ ಪಕ್ಕದ ಹೊಲವು
ತಿಳಿಗಾವಲಿ ನೀರು
ನಡೆದು ಬಂದೆ ನಾನು
ನಿನ್ನ ಪ್ರೀತಿ ಹೊತ್ತು
ಹುಡುಕುತ್ತಿರುವೆ
ಜಿನುಗುವ ಮಳೆ
ಸಂತಸದ ಮುತ್ತು
ಹುಡುಕುತ್ತಿರುವೆ
ಹುಡುಕುತ್ತಲೇ ಇರುವೆ
ನೀ ನನ್ನ ಸೊತ್ತುು


-ಡಾ.ಶಶಿಕಾಂತ .ಪಟ್ಟಣ ಪುಣೆ

Don`t copy text!