ಆರಕ್ಷಕರೇ ನೀವು ಯಾರ ರಕ್ಷಕರು?

ಆರಕ್ಷಕರೇ ನೀವು ಯಾರ ರಕ್ಷಕರು?

ಆರಕ್ಷಕರೇ ನೀವು ಯಾರ ರಕ್ಷಕರು?
ಅಮಾಯಕರಿಗೆ ಬೂಟಿನ ಏಟು
ನಾಲಾಯಕರಿಗೆ ಎದೆಯುಬ್ಬಿಸಿ ಸೆಲೂಟು.
ಕಾರಿನ ಶಬ್ದಕ್ಕೆ ಹೆದರುವದು ನಿಮ್ಮ ಲಾಟಿ
ಬೀಳಿಸುವದು ಸೈಕೆಲ್ಲಿನ ಚಕ್ರದೊಳಗೆ ನಾಟಿ

ಹೇಗೆಂದರೆ ಹಾಗೆ ಬೀಸಬೇಡಿ ನಿಮ್ಮ ಲಾಟಿ
ತೀವ್ರನಿಗಾ ಘಟಕದಲ್ಲಿದೆ ಬಡವರ ಬದುಕು ಎಲ್ಲಾ ಹಂತಗಳ ದಾಟಿ.
ತಿಳಿಸಿ ಹೇಳಿ ಕೇಳದಿದ್ದರೆ ಜೈಲಿಗೆ ತಳ್ಳಿ
ಎಲ್ಲಾ ನೀವೇ ಮಾಡಿದರೆ ನ್ಯಾಯಾಲಯದ ಕೆಲ್ಸ ಏನು?

ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ
ಇದು ಹೇಳದಿದ್ದರೂ ತಿಳಿಯುವ ಶಾಸ್ತ್ರ
ನಿಮಗನ್ನುವದೂ ತಪ್ಪು,ನಾಯಕರು ಮಾಡಿದ್ದೇ ಸೂತ್ರ.
ಅವರೇಳಿದಂತೆ ಮಾಡಬೇಕು ನೀವು ಪಾತ್ರ.

ದುಡಿದು ತಿನ್ನುವವರ ಬಾಯಿಗೆ ಮಣ್ಣು
ಸರಕಾರಗಳಿಗೆ ಇಲ್ಲ ಕರುಣೆಯ ಕಣ್ಣು
ಕೊರೊನಾಕ್ಕೆ ರತ್ನಗಂಬಳಿ ಹಾಸಿ ಸ್ವಾಗತಿಸಿದವರಾರು?
ಸಾವಿರಗಟ್ಟಲೇ ಜನಸೇರಿಸಿ ಸಭೆಮಾಡಿ
ಅವರ ಮೈಯೊಳಗೆ ಕೊರೊನಾ ನುಗ್ಗಿಸಿದವರಾರು?

ಎತ್ತಿಗೆ ಜ್ವರಬಂದ್ರೆ ಎಮ್ಮೆಗೆ ಬರೆ
ಬಿದರಿನ ಪುಟ್ಟಿಯಲ್ಲಿ ತಂದ ಕಾನೂನು
ಜನಸಾಮಾನ್ಯರಿಗೇ ಹೊರೆ
ಜನರ ಕಷ್ಟ ಕೇಳದೆ ತೆಪ್ಪಗಿದ್ದಾನೆ ದೊರೆ
ಇನ್ಯಾರು ಕೇಳಬೇಕು ಬಡವರ ಮೊರೆ

ಬೀಸಬೇಡಿ ಆರಕ್ಷಕರೆ ಹೇಗಂದರೆ ಹಾಗೆ ಲಾಟಿ
ನಮ್ಮವರು ದಡ್ಡರಲ್ಲ ಮುಗ್ದರು
ಮುಗ್ಲರ್ದು ಮ್ಯಾಲೆ ಬಿದ್ದರು ತಮ್ಮವರಿಗಾಗಿ ಪರಿತಪಿಸುವವರು.
ಭಾವನಾ ಜೀವಿಗಳು ಇಡೀ ಭುವನಕ್ಕೇ ಮಾದರಿಯಾದವರು.

-ಸುರೇಶ ಬಳಗಾನೂರು

Don`t copy text!