ಬಸವಣ್ಣ ನಿನ್ನ ಮೆರವಣಿಗೆ .
ಸಮತಾವಾದಿ ವಿಶ್ವ ಬಂಧು
ಕ್ರಾಂತಿಕಾರಿ ಬಸವಣ್ಣ .
ಇಂದು ನಿನ್ನ ಹುಟ್ಟು ಹಬ್ಬ.
ಪಂಚಾಂಗದ ತಿಥಿಗೆ ಜನನ .
ಬೆಳಿಗ್ಗೆ ಸ್ನಾನ ಶುಭ್ರ ಬಟ್ಟೆ .
ಬೆಳ್ಳಿಯ ತೊಟ್ಟಿಲಲ್ಲಿ
ನಿನಗೆ ಮುತ್ತೈದೆಯರ ಆರತಿ.
ಹೊರಗೆ ಬಣ್ಣದ ತೇರು.
ಜಾತ್ರೆ ಆಟ ಮೋಜು .
ಸಂಜೆ ಭವ್ಯ ಮೆರವಣಿಗೆ
ನಿನ್ನ ಭಾವ ಚಿತ್ರಕ್ಕೆ
ಕಪಟ ಕಾವಿಗಳ ಪೂಜೆ
ಭ್ರಷ್ಟ ನಾಯಕರ ಗುಣಗಾನ
ಭಾಷಣ ಭರವಸೆ .
ರಂಗೀನ ಎತ್ತುಗಳ ಸಾಲು .
ಎಲ್ಲದಕ್ಕೂ ಮುಂದೆ
ಗೌಡರ ಜೋಡೆತ್ತಿನ ಡೌಲು
ಗುಲಾಲು ಡೊಳ್ಳುಕುಣಿತ .
ಪತ್ರಿಕೆ ಟಿವಿ ಮಾಧ್ಯಮದಿ
ನಾವೆಲ್ಲಾ ಮಿಂಚಿದೆವು.
ಪ್ರಸಾದ ಉತ್ಸಾಹ ಉನ್ಮಾದ
ಅಂತೂ ಮಾಡಿ ಮುಗಿಸಿದೆವು
ಬಸವಣ್ಣ ನಿನ್ನ ಜಯಂತಿ .
ಮತ್ತೆ ಅಕ್ಷಯ ತೃತೀಯಕ್ಕೆ.
ನಿನ್ನ ನೆನಪು ಸಡಗರ .
ಶರಣು ಶರಣಾರ್ತಿ .
ಡಾ.ಶಶಿಕಾಂತ.ಪಟ್ಟಣ-ಪೂನಾ
(ಬಸವ ಜಯಂತಿ ಇಂದು ವಿಶ್ವಾಧ್ಯಂತ ಜರುಗಿದರೂ ನಮ್ಮಲ್ಲಿ ಇನ್ನು ಅನೇಕ ಜಾತಿ ಕರ್ಮಠ ವ್ಯವಸ್ಥೆ ಮಧ್ಯೆ ಬಸವ ತತ್ವ ಬಳಲುವಂತಾಗಿದೆ. ಈ ನೋವು ಎಲ್ಲರದ್ದು)