ಬಸವ ಬಹುಪರಾಕ್🙏🏻 ಈದ್ ಮುಬಾರಕ್
ಎಂತಹಾ ವಿಸ್ಮಯದ ಮೋಡಿ
ಬೆಸೆದಿದೆ ಭಾವೈಕ್ಯತೆ ಕೊಂಡಿ
ಬಂದಿವೆ ಕೊಂಚ ಇಲ್ನೋಡಿ
ಬಸವ ಜಯಂತಿ , ರಂಜಾನ್ ಜೊತೆಗೂಡಿ.
ಬಸವ ತತ್ವ ಕಿರಣ ಒಡಮೂಡಿ
ಕಾಯಕ ತತ್ವ ನಿಂತು ಜಗದಡಿ
ವಿಶ್ವ ಮಾನವ ಸಂದೇಶ ಹರಡಿ
ಪ್ರಜಾ ಪ್ರಭುತ್ವಕ್ಕೆ ಈತನೇ ಮುನ್ನುಡಿ.
ಈದ್ ಮಿಲಾದ್ ಮಿಲನದಡಿ
ಸ್ನೇಹ ಬಾಂಧವ್ಯ ಎತ್ತಿ ಹಿಡಿ
ನಾನು ನನ್ನದು ಇದು ಪಕ್ಕಕ್ಕಿಡಿ
ಮಾನವೀಯತೆಗೆ ಜೀವ ಪಣವಿಡಿ.
ಆಚರಿಸಲು ಒಂದುಗೂಡಿ.
ಉಲ್ಲಾಸವು ಎಲ್ಲೆಡೆ ಮೂಡಿ
ಸ್ನೇಹ ಸಂಬಂಧವಾಗಿ ಇಮ್ಮಡಿ
ಆಗಲೇ ಸೌಹಾರ್ದತೆ ನೋಡಿ
ದೇಶಕ್ಕಾಗಿಯೇ ದುಡಿದು ಮಡಿ
ನಾವೆಲ್ಲ ಒಂದೇ ಎಂಬ ಮಂತ್ರದಡಿ
ಬಾಳೋಣ ಜೀವನವಿಡೀ
ಇದೇ ಪ್ರತಿ ಭಾರತೀಯನ ನುಡಿ.
✍🏻 ಮಹೇಂದ್ರ ಕುರ್ಡಿ
*ಎಲ್ಲಾ ಭಾರತೀಯ ಬಾಂಧವರಿಗೆ ಬಸವ ಜಯಂತಿಯ ಹಾಗೂ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು*🙏🏻🙏🏻💐💐🙏🏻🙏🏻