e- ಸುದ್ದಿ, ಮಸ್ಕಿ
ಪಟ್ಟಣದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ತಾಲ್ಲೂಕು ಆಡಳಿತ ಮುದಗಲ್ ರಸ್ತೆ ಮೊರಾರ್ಜಿ ವಸತಿ ಶಾಲೆಯಲ್ಲಿ ಶುಕ್ರವಾರದಿಂದ ಕೊವಿಡ್ ಆರೈಕೆ ಕೇಂದ್ರವನ್ನು ಆರಂಭಿಸಿದೆ.
ಸದ್ಯ 25 ಬೆಡ್ ಗಳನ್ನು ಹಾರೈಕೆ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದ್ದು ಕರೊನಾ ಸೋಂಕಿತರ ಸಂಖ್ಯೆಗೆ ಅನುಗುಣವಾಗಿ ಬೆಡ್ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು ಎಂದು ತಹಶೀಲ್ದಾರ ಬಲರಾಮ ಕಟ್ಟಿಮನಿ ತಿಳಿಸಿದರು.
ಕೊವಿಡ್ ಆರೈಕೆ ಕೇಂದ್ರದಲ್ಲಿ ಡಾ. ಮೌನೇಶ ನೇತೃತ್ವದಲ್ಲಿ ವೈದ್ಯರ ತಂಡ ಇರಲಿದೆ. ಸೋಂಕಿತರಿಗೆ ಊಟ, ಉಪಹಾರ, ಪೌಷ್ಠಿಕ ಹಣ್ಣುಗಳನ್ನು ನೀಡಲಾಗುವುದು. ವೈದ್ಯರಿಂದ ಸೂಕ್ತ ಆರೈಕೆ ಹಾಗೂ ಔಷಧ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ಶುಕ್ರವಾರ ಸಂಜೆಯಿಂದಲೇ ಪಟ್ಟಣದಲ್ಲಿ ಕರೊನಾ ಸೋಂಕಿತರನ್ನು ಕೊವಿಡ್ ನಿಯಮದ ಪ್ರಕಾರ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.