ಹಣಿ ಮ್ಯಾಗಿನ ಸಿಂಧೂರ
ಕೂದಲು ತುರುಬು ಸುತ್ತು ಹೊಡೆದು ನಿಂತ ನಾರಿ
ಹೊರಳಿ ಹೊರಳಿ ನೋಡುತ್ತಾ ಇದ್ದಳು ಭಾರಿ
ಕಾಸಗಳದ ಹಣೆ ಮ್ಯಾಗಿನ ಸಿಂಧೂರದ ಪೋರಿ
ಮಾವಿನ ಎಸೆಳ್ಳಿನಂಗ ಇದ್ದ ಕಣ್ಣಿನ ಆ ನೋಟದ ಪರಿ
ತುಸು ಹೆಚ್ಚೇ ನಾಚುವ ಚೆಲುವೆಯ ಮಾರಿ
ಕಂಡೆ ನಾ ಹೋದೆ ದಂಗಾಗಿ ಹೌಹಾರಿ
ಮೆಲ್ಲಗೆ ಬಂದು ನನ್ನ ಜೊತೆ ಜೊತೆಗೆ ನಿಂತಳು ಸೇರಿ
ಬೆಳ್ಳ ಬೆಳ್ಳಗಿನ ಮುದ್ದಾದ ಸುಕುಮಾರಿ
ಇಲಕಲ್ ಸೀರೆ, ಸೆರಗನ್ಯಾಂಗ ಕುಸಲದ ಕುಬೂಸ
ನಡು ನಡುವೆ ಮಾತಿನ ಮಾಲೆ ಮೋಡಿ ರಭಸ
ಸರಾಸರ್ ಬೈತಳು ಬಿಂದಿ ಎಳೆದಸದ ಸೋಜಿಗ ಸೊಗಸ
ಬಿಂದಿಗೆ ಬಿದ್ದೆ ನಾ ಹಂಗೆ ಬಲುಪಸಂದ ಸೊಬಗ
ನೀ ಹಿಂಗ್ ಕಾಡಿದ್ರೆ ಚಕೋರಿ
ನಾ ಹ್ಯಾಂಗ್ ಸುಮ್ನೆ ಕೂರಲಿ
ಪ್ರೀತಿಯ ಪಾರಿವಾಳ ನಿ ಪೋರಿ
ನಾ ನಿನ್ನ ಕಾವಲು ಕಾಯಲಿ
– ಕವಿತಾ ಮಳಗಿ ಕಲಬುರ್ಗಿ