ಮಸ್ಕಿಯ ಶರಣರು

ಮಸ್ಕಿಯ ಶರಣರು

ರೋಗ ಎಂದು ಹೋದರೆ ರಾಗಿ ತಿನ್ನೆನ್ನುವರು
ಬಾಧೆ ಎನ್ನುವರಿಗೆ ಯೋಗ ಮಾರ್ಗ ತೋರುವರು
ತಲೆ ಸಿಡಿತ ಕಳೆಯಲು ಬಾ(ಟೆನ್ನಿಸ್) ಆಟಕೆ ನಸುಕಲಿ ಎನ್ನುವರು
ಅವರೇ ನಮ್ಮ ಡಾಕ್ಟರ್ ಇತ್ಲಿ ಶಿವಶರಣಪ್ಪನವರು

ಹರಸಿ, ಕರಗುವ ಹೃದಯವದು ಹೆಣ್ಣು
ಅಭಿಮಾನ ಪಡುವುದು ಮಸ್ಕಿಯ ಮಣ್ಣು
ಇವರ ಕಂಡರೆ ಮಾಯವದು ಮನದ ಹುಣ್ಣು
ಇವರೇ ಮಸ್ಕಿಯ ಮೂರನೆ ಕಣ್ಣು
ಅವರೇ ನಮ್ಮ ಡಾಕ್ಟರ್
ಇತ್ಲಿ ಶಿವ-ಶರಣಪ್ಪ ವೆರಿ ಚಾಪ್ಟರ್

ಪರಿಸರ ಪ್ರೇಮಿ, ವಚನ ಶಿರೋಮಣಿ
ಸಾಧನ ಯೋಗಿ-ನಿರ್ಭೋಗಿ
ವ್ಯಾಧಿಯ ಕಳೆಯುವ ಮಸ್ಕಿಯ ಜೋಗಿ
ದೇಹದ ವಯಸಿಗೆ ಅಂಕಿಯೇ ಮುಪ್ಪು
ತಾರುಣ್ಯ ಕಂಡರೆ ಯುವಕರೇ ಬೆಪ್ಪು

ದಾನಕೂ ಅವರಿಗೂ ಬಿಡಿಸಿದ ನಂಟು
ಜ್ಞಾನಕೂ ಅವರಿಗೂ ಮೆಚ್ಚಿನ ಗಂಟು
70 ರ ಯುವಕ ಇನ್ನೆಲ್ಲುಂಟು
ನಕ್ಕರೆ ಸುರಿವುದು ಬೆಳಕಿನ ಗಂಟು
ನೇಸರ ಕೂಡ ನಾಚುವುದುಂಟು

ರೇಗಿದ ರೋಗಕೆ ರಾಮ ಬಾಣ
ಬಡವರಿಗಿವರೆದೆ ಅನ್ನಪೂರ್ಣೆಯ ತಾಣ
ಆಪತ್ತೆಂದವರಿಗೆ, ಆಪ್ತತೆ ತೋರುವ ಜಾಣ
ಕಹಿ ಕಳೆದು ಹಂಚುವರಿವರು ಸಿಹಿ ಹೂರಣ
ಇವರೇ ಮಸ್ಕಿಯ ನಿಜ ಶರಣ, ನಿಜ ಶರಣ

ವರದೇಂದ್ರ.ಕೆ.ಶಿಕ್ಷಕರು, ಮಸ್ಕಿ

2 thoughts on “ಮಸ್ಕಿಯ ಶರಣರು

  1. ಸತ್ಯ ಸಂಗತಿಯನ್ನು ತಮ್ಮ ಎದೆಯಾಳದ ಅಕ್ಷರ ಮಾಲೆಯಿಂದ ಎಲ್ಲರ ಮನವೆಂಬ ಕೊರಳಿಗೆ ಅಭಿಮಾನದ ಮಾಲೆಯ ತೊಡಿಸಿರುವ ಶ್ರೀಯುತ ವರದೇಂದ್ರ ಕೆ. ಶಿಕ್ಷಕ ರವರಿಗೆ ಅನಂತ ಧನ್ಯವಾದಗಳು…

Comments are closed.

Don`t copy text!