ಸಾಗರ
ಸಾಗರ ನೀನು
ನಿನ್ನ ಅರಿತವರಾರು
ಅಲೆಗಳ ರೂಪ ತಳೆವೆ
ದಡದಿ ಅಪ್ಪಳಿಸುವೆ
ಆಳಕ್ಕಿಳಿದು ಅರಸಿದರೆ
ಸ್ಥಬ್ಧ ವಾಗಿರುವೆ
ಆಕಾಶದ ನೀಲಿ
ಹೊತ್ತುಕೊಂಡಂತೆ
ನೀಲಕಾಯನಾದರೂ
ಬಾಗಿದ ಆಕಾಶವ ಸೇರದೇ
ತಟಸ್ತ ನಾಗಿರುವೆ
ಅಮೂಲ್ಯ ಮುತ್ತುಗಳ
ಒಡಲಲಿ ಅಡಿಗಿಸುವೆ
ಕಸಕಡ್ಡಿಗಳ ದಡಕ್ಕೆಸೆಯುವೆ
ಜಗತ್ತನ್ನೇ ಸುತ್ತುವರಿದರೂ
ನಿನ್ನ ಮಿತಿಯನು ನೀನು ಅರಿತಿರುವೆ.
–ಪ್ರೊ ರಾಜನಂದಾ ಘಾರ್ಗಿ ಬೆಳಗಾವಿ