ಸಿಹಿಯಾಯಿತು ಕಡಲು
ಹೀಗೊಂದು ಸಂಜೆ
ಬಹು ದೊಡ್ಡ ಹಡುಗಿನಲಿ
ಸಮುದ್ರಯಾನದ ಸುಖ
ಒಂಟಿತನ ಕಾಡುವ ನೆನಪು
ಕಣ್ಣು ಒದ್ದೆಯಾದವು ಗೆಳತಿ
ನಿನ್ನ ನೆನಪಿನಲಿ
ಅಬ್ಬರದ ತೆರೆ ಅಲೆ ಆರ್ಭಟ
ಕೆಳಗೆ ಇಣುಕಿ ನೋಡಿದೆ
ಉದುರಿತು ಹನಿ ಕಣ್ಣೀರು
ಸಾಗರದಲ್ಲಿ ತೇಲಿ ಹೋಯಿತು
ಶಪಥಗೈಯ್ಯುವೆ ನನ್ನ ಗೆಳತಿ
ಹುಡುಕಿ ತರುವೆ ಕಳೆದ ಹನಿ
ಕಡಲಾಳಕೆ ಈಜಿ ಹೋದೆನು
ನಿನ್ನ ನೆನಪಿನ ಮುತ್ತು ಹನಿಗೆ
ಕಣ್ಣ ಹನಿ ಕೂಡಿಕೊಂಡಿತು
ಸಿಹಿಯಾಯಿತು ಕಡಲು
–ಡಾ.ಶಶಿಕಾಂತ ಪಟ್ಟಣ ಪುಣೆ
ಕಡಲನ್ನೂ ಸಿಹಿಯಾಗಿಸುವ ಶಕ್ತಿ ಪ್ರೇಮಕ್ಕೆ ಮಾತ್ರ ಅನಿಸುತ್ತದೆ. ಸೊಗಸಾಗಿದೆ ಸರ್…..