ಅಪೂರ್ಣ

 

ಅಪೂರ್ಣ

ಕನಸುಗಳು ಉದುರಿ
ಆಸೆಗಳು ಹಾರಿ
ಉಳಿದಿಲ್ಲಾ ಏನೂ

ಅರಸಿದೆ ಏನೋ?
ದೊರೆಯಿತು ಮತ್ತೇನೋ?
ಬಯಸುವುದರಲ್ಲಿ ಅರ್ಥವೇನು?

ಕಳೆದುಕೊಳ್ಳಲು ಬೆಲೆ
ಮಾತಿಗಿಂತ ಮೌನವೇ
ಸರಿ ಎನಿಸುತ್ತಿದೆ

ಕತ್ತಲಾವರಿಸಿದೆ ಎಲ್ಲೆಡೆ
ಕಣ್ತೆರೆದು ನೋಡಲೋಲ್ಲೇ
ಅಂತರಾಳದಿ ನಾ ಕುರುಡಿ

ಆದರೂ ಮೌನದಿ,
ಉರುಳಿ ಹೋಗಿದೆ,
ಕಾಯುತ್ತೀರುವೆ ಏನನ್ನೋ?

ಮಂಜುಶ್ರೀ ಬಸವರಾಜ ಹಾವಣ್ಣವರ 

Don`t copy text!