e-ಸುದ್ದಿ, ಮಸ್ಕಿ
ಕರೊನಾ ಸೋಕಿಂತರಲ್ಲಿ ಹಲವರಿಗೆ ಉಸಿರಾಟದ ತೊಂದರೆ ಇರುವವರು ಇನ್ನು ಮುಂದೆ ಪರದಾಡಬೇಕಿಲ್ಲ. ಮಸ್ಕಿಯಯಲ್ಲಿ ಅದರ ಸೌಲಭ್ಯ ಒದಗಿಸಲಾಗಿದೆ ಎಂದು ತಹಸೀಲ್ದಾರ ಬಲರಾಮ ಕಟ್ಟಿಮನಿ ಹೇಳಿದರು.
ಪಟ್ಟಣದ ಅನ್ನಪೂರ್ಣ ನರ್ಸಿಂಗ್ ಹೊಂ ಆವರಣದಲ್ಲಿ ಗುರುವಾರ ಸರಳವಾಗಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಭ್ರಮರಾಂಬ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆ ಮತ್ತು ರಾಯಚೂರಿನ ಭಾರತೀಯ ಜೈನ್ ಸಂಘದ ಸಹಯೋಗದಲ್ಲಿ ಆಕ್ಸಿಜನ್ ಮಶೀನ್‍ಗಳನ್ನು ದೇಣಿಗೆ ನೀಡಿದ್ದಾರೆ. ಆಕ್ಸಿಜನ್ ಕೊರತೆ ಇರುವವರು ಕಡಿಮೆ ದರದ ಸೇವೆಗೆ ಅನುಕೂಲ ಕಲ್ಪಿಸಿದ್ದು ಅವಶ್ಯಕತೆ ಇದ್ದವರು ಬಳಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಈ ಬಾರಿ ಲಾಕ್ ಡೌನ್ ನಿಂದ ಬಡವರು, ದಿನಗೂಲಿಗಳು, ಕಾರ್ಮಿಕರಿಗೆ ತೊಂದರೆಯಾಗಿದ್ದು ಹಣಕಾಸಿನ ಸಂಸ್ಥೆಗಳು ಮತ್ತು ಆರ್ಥಿಕವಾಗಿ ಅನುಕೂಲ ಇರುವವರು ಆಹಾರ ಪದಾರ್ಥಗಳ ಕಿಟ್ಟ್ ತಯಾರಿಸಿ ಹಂಚಲು ಮುಂದಾಗಬೇಕು. ಅಥವಾ ತಾಲೂಕು ಆಡಳಿತಕ್ಕೆ ನೀಡಿದರೆ ನಾವು ವಿತರಿಸುವದಾಗಿ ತಹಸೀಲ್ದಾರ ಬಲರಾಮ ಕಟ್ಟಿಮನಿ ಮನವಿ ಮಾಡಿದರು.
ಪುರಸಭೆಯ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಮಾತನಾಡಿ ಈಗಗಾಲೇ ಕರೊನಾ ಸೇನಾನಿಗಳು ಎಂದು ಗುರುತಿಸಿರುವವರಿಗೆ ಲಸಿಕೆ ಹಾಕಲಾಗಿದೆ. ಉಳಿದವರು ಲಸಿಕೆ ಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಮುಂಜಾಗ್ರತ ವಹಿಸುವಂತೆ ತಿಳಿಸಿದರು.
ಭ್ರಮರಾಂಬ ಸಹಕಾರಿ ಸಂಸ್ಥೆಯ ಅಧ್ಯಕ್ಷ ಡಾ.ಶಿವಶರಣಪ್ಪ ಇತ್ಲಿ ಮಾತನಾಡಿ ಸಹಕಾರಿ ಸಂಸ್ಥೆ ಹಣಕಾಸಿನ ವ್ಯವಹಾರ ಮಾಡುವುದು ಮುಖ್ಯ ಉದ್ದೇಶವಾಗಿದ್ದರು ಸಮಾಜದ ಒಂದು ಅಂಗ ಸಂಸ್ಥೆಯಾಗಿರುವದರಿಂದ ಸಂಕಷ್ಟ ಕಾಲದಲ್ಲಿ ಸ್ಪಂದಿಸುವುದು ಮುಖ್ಯ ಜವಬ್ದಾರಿಯಾಗಿದ್ದು ಅದಕ್ಕಾಗಿ ಉಸಿರಾಟದ ತೊಂದರೆ ಇರುವವರಿಗೆ ಆಕ್ಸಿಜನ್ ಮಶೀನ್ ಸಹಾಯದಿಂದ ಉಸಿರಾಟದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಹಾಯವಾಗುವ ಉದ್ದೇಶದಿಂದ ಆಕ್ಸಿಜನ್ ಮಶೀನ್‍ಗಳನ್ನು ಖರೀದಿಸಿ ದೇಣಿಗೆ ನೀಡಲಾಗಿದೆ ಎಂದರು.
ಡಾ.ಮಲ್ಲಿಕಾರ್ಜುನ ಇತ್ಲಿ, ಮಹಾಂತೇಶ ಮಸ್ಕಿ, ಭ್ರಮರಾಂಬ ಸಿಇಒ ವೀರೇಶ ಹಿರೇಮಠ ಮಾತನಾಡಿದರು. ಭ್ರಮರಾಂಬ ಸಹಕಾರಿಯ ಉಪಾಧ್ಯಕ್ಷ ಪಂಪಣ್ಣ ಗುಂಡಳ್ಳಿ, ನಿರ್ಧೆಶಕ ಪ್ರಕಾಶ ಧಾರಿವಾಲ ಉಪಸ್ಥಿತರಿದ್ದರು.