ತಾಯಿ ಹೃದಯದ ಕನಕಗಿರಿ-ಮೆದಕಿನಾಳ ಡಾ.ಚನ್ನಮಲ್ಲ ಮಹಾಸ್ವಾಮಿಗಳು
e-ಸುದ್ದಿ, ಮೆದಕಿನಾಳ
ಕನಕಗಿರಿ-ಮೆದಿಕಿನಾಳದ ಶ್ರೀ ಸುವರ್ಣಗಿರಿ ಸಂಸ್ಥಾನ ವಿರಮಠವು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಡಾ. ಚೆನ್ನಮಲ್ಲ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಮಾಜದಲ್ಲಿ ಅಸಹಾಯಕರಿಗೆ ಸಹಾಯದ ಹಸ್ತವನ್ನು ಚಾಚುತ್ತಿದೆ.
2018ರಲ್ಲಿ ಕೊಡಗಿನ ನೆರೆ ಸಂತ್ರಸ್ತರಿಗಾಗಿ 50,001/-ರೂ.ಗಳನ್ನೂ ಹಾಗೂ 10 ಕ್ವಿಂಟಾಲ ಅಕ್ಕಿ, 1 ಕ್ವಿಂಟಾಲ ಗೋಧಿ, 3,1/2 ಕ್ವಿಂಟಾಲ ತೊಗರಿ ಬೇಳೆ, 2 ಕ್ವಿಂಟಾಲ, ಅಕ್ಕಿ ನುಚ್ಚನ್ನು ಸಿ.ಎಂ ಪರಿಹಾರ ನಿಧಿಗೆ ಅರ್ಪಿಸಿದ್ದಾರೆ. ಅಲ್ಲದೇ 2019ರಲ್ಲಿ ಮತ್ತೆ ನೆರೆಯಿಂದ ರಾಜ್ಯಕ್ಕೆ ತೊಂದರೆಯಾದಾಗ ಸಿ.ಎಂ. ಪರಿಹಾರ ನಿಧಿಗೆ 50,001/- ಗಳನ್ನು ನೀಡಿರುವದಲ್ಲದೆ, ಅದೇ ವರ್ಷ ನೆರೆಯಿಂದಾಗಿ ಬಾದಾಮಿಯ ಶಿವಯೋಗಮಂದಿರ ಮಲಪ್ರಭಾ ನದಿಯ ಪ್ರವಾಹದಿಂದಾಗಿ ಸಂಪೂರ್ಣವಾಗಿ ಮುಳುಗಿದ್ದರಿಂದ ಅಲ್ಲಿನ ನೂರಾರು ಗೋವುಗಳಿಗೆ ತೊಂದರೆಯಾದಾಗ ಶಿವಯೋಗಮಂದಿರ ಸಂಸ್ಥೆಗೆ 50,000/- ರೂಗಳನ್ನು ನೀಡಲಾಗಿದೆ.
2020 ಕಳೆದ ವರುಷ ಜಗತ್ತಿಗೆ ಕಾಡಿದ ಕರೋನ ಮಹಾಮಾರಿಯ ವಿರುದ್ಧ ಹೋರಾಡಲು ಸಿ.ಎಂ.ಪರಿಹಾರ ನಿಧಿಗೆ 50,001/-ರೂಗಳನ್ನು ನೀಡಿದ್ದಾರೆ. ಈ ವರುಷ ಮತ್ತೇ ಕರೋನದ 2ನೇ ಅಲೆಯೂ ಭೀಕರವಾಗಿ ಜನರನ್ನು ಕಾಡುತ್ತಿದೆ. ಲಾಕ್ಡೌನಿನ ಈ ಸಂದರ್ಭದಲ್ಲಿ ಬಡವರ ಬದುಕು ದುಡುಮೆ ಇಲ್ಲದೇ, ಮನೆಯಲ್ಲಿ ಊಟಕ್ಕೂ ದುಸ್ತರವಾಗಿರುವುದನ್ನು ಮನಗಂಡು ಕನಕಗಿರಿ-ಮೆದಿಕಿನಾಳ ಭಾಗದ 100 ಆಯ್ದ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ನೀಡುವ ಮೂಲಕ, ಸಾಮಾಜಿಕವಾಗಿ ಶ್ರೀಮಠ ತನ್ನ ಜವಾಬ್ದಾರಿಯುತ ಕೆಲಸವನ್ನು ಮಾಡುತ್ತಿದೆ.
ಆಹಾರ ಧಾನ್ಯಗಳ ಚೀಲದಲ್ಲಿರುವ ಸಾಮಗ್ರಿಗಳು:
1) 5 ಕೆ.ಜಿ. ಸೋನಾಮಸೂರಿ ಅಕ್ಕಿ
2) 1 ಕೆ.ಜಿ. ಗೋಧಿ ಹಿಟ್ಟು,
3) 1 ಕೆ.ಜಿ. ಬೇಳೆ
4) 1 ಕೆ.ಜಿ. ಒಳ್ಳೆ ಎಣ್ಣೆ
5) 1 ಕೆ.ಜಿ. ಅಲಸಂಧಿ ಕಾಳು
6) 1 ಕೆ.ಜಿ. ಶೇಂಗಾ ಬೀಜ
7) 1 ಕೆ.ಜಿ. ಸಕ್ಕರೆ
8) 1 ಕೆ.ಜಿ. ರವಾ
9) 1 ಕೆ.ಜಿ. ಉಪ್ಪು
10) MTR ಮಸಾಲಿ,
11) ಜೀರಿಗೆ
12) ಸಾವಿರ
13) ಬಳ್ಳೊಳ್ಳಿ
14) ಖಾರ ಪುಡಿ
15) ಅರಿಶಿಣ ಪುಡಿ
16) ಚಹಾ ಪುಡಿ
17) 1 ಮೈಗೆ ಹಚ್ಚುವ ಸೋಪ 18) 1 ಬಟ್ಟೆ ತೊಳೆಯುವ ಸೋಪ.
ಈ ಧಾನ್ಯಗಳ ಕಿಟ್ ಗಳನ್ನು ವಿತರಿಸಿದರು.