ಉದಾಸಿ ಅಣ್ಣೋರಿಗೆ

ಉದಾಸಿ ಅಣ್ಣೋರಿಗೆ


ಬಮ್ಮನಹಳ್ಳಿಯ
ಕಿಂದರಜೋಗಿ
ಅಕ್ಕಿ ವ್ಯಾಪಾರದಿ
ಬಾಳನಾಳಿದ ಯೋಗಿ!
ಹಾನಗಲ್ಲಿನ ಮಣ್ಣು
ಹಾವೇರಿಯ ಕಣ್ಣು
ಸಜ್ಜನರ ಸಹವಾಸಿ
ಇವರೆಮ್ಮ ಅಣ್ಣ ಸಿ.ಎಮ್.ಉದಾಸಿ!
ಸರಳ ಸಜ್ಜನ ನೇತಾರ!
ಸತ್ಯ..ಮಿತವ್ಯಯಗಳೇ ಹತ್ಯಾರ!
ಪ್ರಾಮಾಣಿಕ ಆಚಾರ ವಿಚಾರ!
ಸ್ವಂತ ವರರ್ಚಸ್ಸಿನಿಂದ
ಮೊದಲಬಾರಿಯೇ
ಜಯಭೇರಿ!
ಜನತಾ ಪರಿವಾರ ಸೇರಿ
ನಂತರ ಕಮಲಪಡೆಯ ಏರಿ
ಒಟ್ಟೂ ಆರಿಸಿ ಬಂದರು ಆರುಬಾರಿ!
ಗ್ರಾಮೀಣಾಭಿವೃದ್ಧಿ
ಪಂಚಾಯತ್ ರಾಜ್..
ಲೋಕೋಪಯೋಗಿ
ಇಲಾಖೆಗೆ ಹೊಸ ವ್ಯವಸ್ಥೆ!
ಹಳ್ಳಿಹಳ್ಳಿಗೂ ರಸ್ತೆ!
ಬಹುಭಾಷೆಗಳಲಿ ನೈಪುಣ್ಯತೆ!
ಗಣಕದಲ್ಲೂ ಚಾಕಚಕ್ಯತೆ!
ವಿವಿಧತೆಯಲ್ಲಿ ಏಕತೆ!
ಎಲ್ಲರಲ್ಲೂ ಸಮಾನತೆ!
ಅಂಕಿಅಂಶಗಳನು
ಬಾಯ್ದೆರೆಯಾಗಿ
ಹೇಳುವ ನೈಪುಣ್ಯತೆ!
ಮಿತಿ ಮೀರದ ಅಳತೆ!
ಎಲ್ಲದರಲ್ಲೂ ಮಿಗತೆ!
ಎಲ್ಲರಿಗೂ ಅಣ್ಣ..
ಕಲಿಯುವಾಗ ಚಿಣ್ಣ!
ಸಂಚಾರಿ ಪ್ರೌಢ ಶಾಲೆ
ಎಂದೊಡನೆ ಬಿಟ್ಟಿರಿ ಕಣ್ಣ
ಆಡಿದ ಮಾತಿನಂತೆ
ಪದ್ದಣ್ಣನ ಜೊತೆಗೂಡಿ
ಆರೇ ತಿಂಗಳೊಳಗಾಗಿ
ಎರಡು ಹೊಸಕೊಠಡಿಗಳಿಗೆ
ಬಳಿಸಿದಿರಿ ಬಣ್ಣ!
ಎಷ್ಟೋ ಕಾರ್ಯಕ್ರಮಕ್ಕೆ
ನನ್ನದೇ ನಿರ್ವಹಣೆ!
ಪೂರ್ತಿ ವಿಶ್ವಾಸದ ಹೊಣೆ
ತಂದು ಮತ್ತೆ ಮನೆಗೆ ಕಳಿಸಿ
ಕೊಡುವ ನಿಮ್ಮ‌‌
ಪ್ರೀತಿಗೆ ಯಾರು ಎಣೆ!
ಮತ್ತೊಮ್ಮೆ ಹೇಳುವೆನು
ನನಗೆ ನೀವೇ ಸಿ.ಎಮ್
ಅಂದು..ಇಂದು..ಎಂದೆಂದೂ!
ಆದರೆ ನೀವಿಂದು
ಮುಗುಳು ನಗುತ್ತಿಲ್ಲ ಅಣ್ಣ
ಮತ್ತೊಮ್ಮೆ ಹುಟ್ಟಿಬನ್ನಿ ..
ಅಣ್ಣರ ಅಣ್ಣ ಉದಾಸಿಅಣ್ಣ
ಎಂದನಾ ಗುಣವಂತೇಶ್ವರ.

Don`t copy text!