ಸಿ.ಎಂ.ಉದಾಸಿ ಮತ್ತು ಶೇಖರಪ್ಪ ತಳವಾರ ಅವರಿಗೆ ಶ್ರದ್ಧಾಂಜಲಿ

ಸಿ.ಎಂ.ಉದಾಸಿ ಮತ್ತು ಶೇಖರಪ್ಪ ತಳವಾರ ಅವರಿಗೆ ಶ್ರದ್ಧಾಂಜಲಿ

e-ಸುದ್ದಿ, ಮಸ್ಕಿ

ಮಸ್ಕಿ ಬಿಜೆಪಿ ಕಾರ್ಯಾಲಯದಲ್ಲಿ ಮಾಜಿ ಸಚಿವರು ಹಾನಗಲ್ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಸಿ.ಎಂ.ಉದಾಸಿಯವರು ಮತ್ತು ಮಸ್ಕಿ ಕ್ಷೇತ್ರದ ಬಿಜೆಪಿ ಹಿರಿಯ ಮುಖಂಡರಾದ ಶ್ರೀ ಶೇಖರಪ್ಪ ತಳವಾರ ಅವರಿಗೆ ಬುಧವಾರ ಶ್ರದ್ದಾಂಜಲಿ ಸಭೆ ಜರುಗಿತು.

ಮಾಜಿ ಶಾಸಕರಾದ ಶ್ರೀ ಪ್ರತಾಪಗೌಡ ಪಾಟೀಲ್ ಮಾತನಾಡಿ ಅಗಲಿದ ಗಣ್ಯರ ಕುರಿತು ಸ್ಮರಿಸಿದರು. ಬಿಜೆಪಿ ಮುಖಂಡರಾದ ಅಂದಾನಪ್ಪ ಗುಂಡಳ್ಳಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಅಪ್ಪಾಜಿಗೌಡ ಕಾರ್ಲಕುಂಟಿ, ಪ್ರಧಾನ ಕಾರ್ಯದರ್ಶಿಗಳಾದ ಶರಣಬಸವ ಸೊಪ್ಪಿಮಠ, ಡಾ.ಬಿ.ಹೆಚ್.ದಿವಟರ್, ಬಸನಗೌಡ ಪೋ.ಪಾ. ಬಸವರಾಜಸ್ವಾಮಿ ಹಸಮಕಲ್ ‘ ಬಸ್ಸಪ್ಪ ಬ್ಯಾಳಿ, ಶಿವಶಂಕ್ರಪ್ಪ ಹಳ್ಳಿ, ಶಶಿಕಾಂತ ಬ್ಯಾಳಿ , ವಿವಿಧ ಮೊರ್ಚಾ ಅಧ್ಯಕ್ಷರುಗಳಾ ಬಸವರಾಜ ಡೊಣಮರಡಿ, ಶೇರಪಾಷಾ, ನಾಗರಾಜ ಯಂಬಲದ, ಅಭಿಜಿತ್ ಮಾಲಿಪಾಟೀಲ ,ಮಹಾಂತೇಶ ಪಾಟೀಲ್ ಗುಡದೂರು ,ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.

Don`t copy text!