ಭೈರಾಗಿ
ಬಂಡಾಯ ಕವಿಯೋ
ದಲಿತ ಕವಿಯೋ
ಪ್ರೇಮ ಕವಿಯೋ
ಭಾಷಣಕಾರ -ಗಾಯಕನೋ
ಹತ್ತು ಹಲವು
ಪ್ರಶಸ್ತಿಗಳನು ಹೆಕ್ಕಿ ಪಡೆದ
ಪ್ರತಿಭೆಯೊ
ಸ್ಮಶಾನವನ್ನು
ಹೆಣ್ಣಿನ ಸೌಂದರ್ಯದಂತೆ
ಕಂಡೆ
ಉದ್ಯಾನವನದಲ್ಲಿ
ವಿಹರಿಸುವಂತೆ
ವಿಹರಿಸುತಾ
ಸಮಾದಿಯ
ಅಮೃತ ಶಿಲೆಯ
ಮೇಲೆ ಕುಳಿತು
ಕವನಗಳನ್ನು ರಚಿಸಿದೆ
ಸ್ಮಶಾನವನ್ನೇ
ಸ್ವರ್ಗದಂತೆ ಕಂಡ
ಭೈರಾಗಿ
ಮರೆಯಾದನೇ? !
–ಮಾಜಾನ ಮಸ್ಕಿ