ಬದಲಿಸಿತೇ ಜೀವನವಾ….
ಸದಾ ವೇಳೆ ಇಲ್ಲ ಎನ್ನುತ್ತಿದ್ದವರಿಗೆ
ತಾಯಿ, ಹೆಂಡತಿ ಮಕ್ಕಳಿಗೆ ಸಮಯ ಇಲ್ಲದವರಿಗೆ
ಸಿಕ್ಕಿತೇ ಸಮಯ?
ಬದಲಿಸಿತೇ ಜೀವನವಾ….
ಕೆಲಸಕ್ಕೆ ತಡವಾಯಿತು ಎನ್ನುತ್ತಿದ್ದವರಿಗೆ
ಮನೆಯ ತಿಂಡಿ ತಿನ್ನದೇ, ಇರುವವರಿಗೆ
ಸಿಕ್ಕಿತೇ ಸಮಯ?
ಬದಲಿಸಿತೇ ಜೀವನವಾ…
ನಾನಿಲ್ಲದೇ ಆಫೀಸಿನಲ್ಲಿ ನಡೆಯದು ಎನ್ನುತ್ತಿದ್ದವರಿಗೆ
ನಾನೆಂಬ ಅಹಂ ಹೋಗಿ, ಸತ್ಯದರ್ಶನವಾಗಲು
ಸಿಕ್ಕಿತೇ ಸಮಯ?
ಬದಲಿಸಿತೇ ಜೀವನವಾ…..
ಮನೆಯಲ್ಲಿ ಮಕ್ಕಳೊಂದಿಗೆ, ಆಡದವರಿಗೆ
ಮಕ್ಕಳೊಂದಿಗೆ, ಆಟವಾಡಿ ಸಂತಸಹೊಂದಲು
ಸಿಕ್ಕಿತೇ ಸಮಯ?
ಬದಲಿಸಿತೇ ಜೀವನವಾ….
ಪೀಜಾ ಬರ್ಗರ ತಿನ್ನುತ್ತಿದ್ದವರಿಗೆ
ರೊಟ್ಟಿ ಪುಂಡಿ ಪಲ್ಯೆ ಸವಿಯಲು
ಸಿಕ್ಕಿತೇ ಸಮಯ ?
ಬದಲಿಸಿತೇ ಜೀವನವಾ….
ಸದಾ ಮೌನಿಯಾಗಿದ್ದವರಿಗೆ
ಮನೆ ಮಂದಿಯೊಂದಿಗೆ ಮಾತನಾಡಲು
ಸಿಕ್ಕಿತೇ ಸಮಯ ?
ಬದಲಿಸಿತೇ ಜೀವನವಾ…
–ಡಾ.ದಾನಮ್ಮ
————————————————————————–