ಇಂಧನ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಇಂಧನ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

e-ಸುದ್ದಿ, ಬಳಗಾನೂರು

ಮನಮೋಹನ್ ಸಿಂಗ್ ರವರು ಪ್ರಧಾನಿಯಾಗಿದ್ದಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಅಧಿಕವಾಗಿದ್ದರೂ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ 74-75, ರ ಆಸುಪಾಸಿನಲ್ಲಿತ್ತು,

ಆಗ ಬಿಜೆಪಿ ನಾಯಕರು ರೋಡಿಗಿಳಿದು ರಂಪಾಟಮಾಡಿದ್ದರು.
ಈಗ ಕೇಂದ್ರ ರಾಜ್ಯಗಳೆರಡರಲ್ಲೂ ಅವರದ್ದೇ ಸರಕಾರವಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಅಂದಿಗಿಂತ ಇಂದು ಬಹಳ ಕಡಿಮೆಯಿದೆ, ಆದರೂ ಮನಸೋ ಇಚ್ಚೆ ತೆರಿಗೆಹಾಕಿ ಈಗ ಪೆಟ್ರೋಲ್ ಬೆಲೆ ನೂರು ರೂಪಾಯಿದಾಟಿದೆ .ಆಗ ಬೀದಿಗಿಳಿದು ರಂಪಾಟಮಾಡಿದವರು ಎಲ್ಲಿದ್ದಾರೋ ಹುಡುಕಬೇಕಾಗಿದೆ ಎಂದು ಕಾಂಗ್ರೆಸ್ನ ಯುವ ಮುಖಂಡ ಹುಸೇನಭಾಷಾ ಬೂದಗುಂಪ ವ್ಯಂಗ್ಯವಾಡಿದರು.

ಬಳಗಾನೂರಿನ ಭಾರತ್ ಪೆಟ್ರೋಲ್ ಬಂಕ್ನ ಮುಂದೆ ಕೇಂದ್ರ ರಾಜ್ಯ ಸರಕಾರಗಳ ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಂತರ ಮಾತನಾಡಿದ ಇನ್ನೋರ್ವ ಯುವ ಮುಖಂಡ ವೀರಭದ್ರಿ ಹಡಪದ ಪೆಟ್ರೋಲಿಗೂ ಬಡವರಬದುಕಿಗೂ ,ಸರಕಾರಗಳ ಅಳಿವು ಉಳಿವಿಗೂ ಸರಪಳಿಯೋಪಾದಿಯ ಸಂಬಂಧವಿದೆ.

ಇಂಧನ ಬಿದ್ರೇನೆ ರೈತನ ರಥದ ಚಕ್ರ ಉರುಳೋದು, ಅದರಿಂದಲೇ ಕಾಲಚಕ್ರ ತಿರುಗೋದು. ಆದರೆ ಮೋದಿ,ಯಡಿಯೂರಪ್ಪನವರ ಸರಕಾರ ಇಂಧನದ ಬೆಲೆಯನ್ನು ಗಗನಕ್ಕೇರಿಸಿ ಜನರೆಲ್ಲ ಆಕಾಶದತ್ತ ನೋಡುವಂತೆ ಮಾಡಿದ್ದಾರೆ. ಇದೇ ಅಲ್ಲವೇ ಅಚ್ಚೇದಿನ್? ಎಂದು ಪ್ರಶ್ನಿಸಿದರು.

 

ಇಂತಹ ಬಡವರ ವಿರೋದಿ, ಕಾರ್ಪೋರೇಟ್ ಪರಕೆಲಸಮಾಡುವ ಭ್ರಷ್ಟ ಸರಕಾರವನ್ನು ಮುಂಬರುವ ದಿನಗಳಲ್ಲಿ ಕಿತ್ತೆಸೆದು ಬಡವರ ಪರ, ಜನರಪರ, ರೈತಪರ ಇರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಾವೆಲ್ಲರು ಇಂದೇ ಶಪತಮಾಡಬೇಕಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಇದಕ್ಕೂ ಮುಂಚೆ ಬಳಗಾನೂರಿನ ಆರಕ್ಷಕ ಠಾಣೆಯ ಮುಂಭಾಗದಿಂದ ಎತ್ತಿನಗಾಡಿಯಲ್ಲಿ ಸಿದ್ದನಗೌಡ ತಿರುವಿಹಾಳ, ಹಿರಿಯ ಕಾಂಗ್ರೆಸ್ ಮುಖಂಡ ಪಂಪನಗೌಡ ಮಾಲಿ ಪಾಟೀಲ್, ತಾಲೂಕಾ ಪಂಚಾಯ್ತಿ ಮಾಜಿ ಸದಸ್ಯ ಬಸನಗೌಡ್ರು ಮುದೆಗೌಡ್ರು, ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ಸಿದ್ದನಗೌಡ ಮಾಲಿ ಪಾಟೀಲ್, ಯುವ ನಾಯಕ ಸಂಜಯ್ ಶೇಟ್ ಜೈನ್, ಯುವ ಮುಖಂಡ ಹುಸೇನಭಾಷಾ ಬೂದಗುಂಪ, ವೀರಭದ್ರಿ ಹಡಪದ,ಪರಮಾನಂದ ಮೂಲಿಮನಿ, ಮರಿಸ್ವಾಮಿ ಹೊಸಳ್ಳಿ, ಶಂಕ್ರಣ್ಣ ನಾಯ್ಕರ್, ಬಸಪ್ಪ ಗೌಡನಬಾವಿ ಮಲ್ಲಿಕಾರ್ಜುನ ಬಾವಿಕಟ್ಟಿ, ಮೂರು ಎತ್ತಿನ ಬಂಡಿಗಳಲ್ಲಿ ಮೆರವಣಿಗೆ ಹೊರಟರು.

ಬಳಗಾನೂರಿನ ಸಂತೆಬಜಾರದ ಬಳಿ, ಮೂರ್ನಾಲ್ಕು ದ್ವಿಚಕ್ರವಾಹನಗಳಿಗೆ ಹಗ್ಗಕಟ್ಟಿ ಎಳೆಯುವ ಮೂಲಕ ಕೇಂದ್ರ ರಾಜ್ಯ ಸರಕಾರಗಳನ್ನು ಅಣಕಿಸುವ ಅಣಕುಪ್ರದರ್ಶನ ಮಾಡಿದರು.

ಕೇಂದ್ರ ರಾಜ್ಯಸರಕಾರಗಳ ಆಡಳಿತ ವೈಫಲ್ಯ ಹಾಗೂ ಇಂಧನಗಳ ಬೆಲೆ ಏರಿಕೆ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಸರಕಾರಿ ಪ್ರೌಢಶಾಲೆಗೆ ಅಭಿಮುಖವಾಗಿರುವ ಭಾರತ್ ಪೆಟ್ರೋಲ್ ಬಂಕ್ ನ ಮುಂದೆ ಪ್ರತಿಭಟನೆ ಮಾಡಿ ನಾಯಕರು ಭಾಷಣಮಾಡಿ ಕೂಡಲೇ ಇಂಧನದ ಬೆಲೆ ಇಳಿಸಬೇಕು ಇಲ್ಲವೆ ಕುರ್ಚಿಬಿಟ್ಟು ಇಳಿಯಬೇಕೆಂದು ಒತ್ತಾಯಿಸಿದರು

ಈ ಸಂದರ್ಭದಲ್ಲಿ ಸಿದ್ದನಗೌಡ ತುರುವಿಹಾಳ, ಸಿದ್ದನಗೌಡ ಮಾಲಿಪಾಟೀಲ್, ಪಂಪನಗೌಡ ಮಾಲಿಪಾಟೀಲ್, ಬಸನಗೌಡ್ರು ಮುದೇಗೌಡ್ರು, ಹುಸೇನಭಾಷಾ ಬೂದಗುಂಪಾ, ಶಂಕ್ರಣ್ಣ ನಾಯ್ಕರ್, ಶಿವಪುತ್ರ ವಿಶ್ವಕರ್ಮ,ರಜ್ಜುಸಾಬ್ ಹಾದಿಮನಿ, ಮಲ್ಲಿಕಾರ್ಜುನ ಬಾವಿಕಟ್ಟಿ , ವೀರಭದ್ರಿ ಹಡಪದ, ನಾಗರಾಜ , ಮರಿಸ್ವಾಮಿ ಹೊಸಳ್ಳಿ,ರುದ್ರಗೌಡ ಕೊಂಡರಡ್ಡಿ, ಲಿಂಗಪ್ಪ ,ಬಸಪ್ಪ ಗೌಡನಬಾವಿ, ಮಲ್ಲರಡ್ಡಿ ಗೌಡ, ಅಮರಪ್ಪ ಜವಳಗೇರಾ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ,ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವರದಿ,-ಸುರೇಶ ಬಳಗಾನೂರು

Don`t copy text!