ಬಳಗಾನೂರಿಗೆ ಸರ್ಕಾರಿ ಕಾಲೇಜು ಪ್ರಾರಂಭಕ್ಕೆ ಒತ್ತಾಯ

 

e-ಸುದ್ದಿ, ಮಸ್ಕಿ

ಸರ್ಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜು ಹೋರಾಟ ಸಮಿತಿಯ ಸದಸ್ಯರು ಸೋಮವಾರ ಶಾಸಕ ಬಸನಗೌಡ ತುರ್ವಿಹಾಳ ಅವರಿಗೆ ಮನವಿ ಪತ್ರ ಸಲ್ಲಿಸಿ ಕಾಲೇಜು ಆರಂಭಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಬಳಗಾನೂರು ಪಟ್ಟಣಕ್ಕೆ ಪದವಿಪೂರ್ವ ಮತ್ತು ಪದವಿ ಕಾಲೇಜು ಆರಂಭಿಸುವ ಬೇಡಿಕೆ ಬಹುವರ್ಷಗಳಾಗಿದ್ದು ನೆನಗುದಿಗೆ ಬಿದ್ದಿದೆ. ಈ ಕುರಿತು ಈಗಗಲೇ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ. ಅನೇಕ ಬಾರಿ ಹೋರಾಟ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಕಾಲೇಜು ಆರಂಭಿಸುವ ಪ್ರಯತ್ನ ಮಾಡಬೇಕೆಂದು ಹೋರಾಟ ಸಮಿತಿಯ ಪದಾಧಿಕಾರಿಗಳಾದ ರಾಘವೇಂದ್ರ ಕುಲಕರ್ಣೀ, ಗೋವಿಂದರಡ್ಡಿ ಗದ್ದಿ, ಸುರೇಶ ಬಳಗಾನೂರು ರಮೇಶ್ ಮರಡ್ಡಿ ಒತ್ತಾಯಿಸಿದರು.
ಮನವಿ ಸ್ವಿಕರಿಸಿದ ಶಾಸಕ ಬಸನಗೌಡ ತುರ್ವಿಹಾಳ ಮಾತನಾಡಿ ಸರ್ಕಾರದ ಮೇಲೆ ಒತ್ತಡ ಹಾಕಿ ಪ್ರಾರಂಭಿಸಲು ಪ್ರಮಾಣಿಕ ಪ್ರಯತ್ನ ಮಾಡುವೆ ಎಂದರು.

Don`t copy text!