ಕರಡಕಲ್ಲ ಕೆರೆಯಲ್ಲಿ ಬೋಟ್ ಪರೀಕ್ಷೆ
e-ಸುದ್ದಿ ಲಿಂಗಸುಗೂರು
ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾದರೆ ಕೃಷ್ಣಾನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರುಹರಿದರೆ ಪ್ರವಾಹವಾಗುವ ಭೀತಿಯಿಂದ ತಾಲೂಕಾಡಳಿತವು ಮುನ್ನೆಚ್ಚರಿಕೆಯ ಕ್ರಮವಾಗಿ ಅಗ್ನಿಶಾಮಕ ದಳದ ಸಹಯೋಗದಲ್ಲಿ ಪಟ್ಟಣದ ಕರಡಕಲ್ಲ ಕೆರೆಯಲ್ಲಿ ಬೋಟ್ ನ ಪರೀಕ್ಷೆಯನ್ನು ನಡೆಸಲಾಯಿತು.
ಬೋಟ್ ನ ಸುವ್ಯವಸ್ಥೆ ಮತ್ತು ಅದನ್ನು ಚಾಲನೆ ಗೊಳಿಸುವ ರೀತಿಯನ್ನು ಪ್ರಾಯೋಗಾರ್ಥವಾಗಿ ನಡೆಸಿದರು.
ತಾಲೂಕಿನ ನಡುಗಡ್ಡೆಗಳಾದ ಮ್ಯಾದರಗಡ್ಡಿ ಕರಕಲಗಡ್ಡಿ ನದಿಗೆ ಪ್ರವಾಹಬಂದರೆ ತೊಂದರೆಗೆ ಒಳಗಾಗುತ್ತವೆ ಅಲ್ಲಿರುವ ಕುಟುಂಬಗಳು ನಡುಗಡ್ಡೆಯಲ್ಲಿ ಸಿಲುಕುವುದರಿಂದ ಅನಿವಾರ್ಯವಾದರೆ ಅವರನ್ನು ಕರೆತರುವ ಕೆಲಸವನ್ನು ಮಾಡಬೇಕಾಗುತ್ತದೆ ಅದಕ್ಕಾಗಿಯೆ ತಾಲೂಕಾಡಳಿತವು ಮುಂಚಿತವಾಗಿಯೆ ಬೋಟಿನ ಪರೀಕ್ಷೆ ನಡೆಸಿದರು.