ಮಸ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳ, ಚುರುಕುಗೊಂಡ ಕೃಷಿ ಚಟುವಟಿಕೆ

 

 

e-ಸುದ್ದಿ, ಮಸ್ಕಿ

ತಾಲೂಕಿನ ಮಾರಲದಿನ್ನಿ ಹತ್ತಿರ ಇರುವ ಮಸ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದೆ ಎಂದು ಎಇಇ ದಾವುದ್ ತಿಳಿಸಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ಕುಷ್ಟಗಿ ಭಾಗದಲ್ಲಿ ಮಳೆಯಾಗುತ್ತಿರುವದರಿಂದ ಮಸ್ಕಿ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ.
ಈಗಾಗಲೇ ಜಲಾಶಯದಲ್ಲಿ 14 ಅಡಿ ನೀರು ಸಂಗ್ರಹವಾಗಿದ್ದು ಜಲಾಶಯ ಭರ್ತಿಗೆ 15 ಅಡಿ ನೀರು ಬರಬೇಕಾಗಿದೆ. 0.5 ಟಿ.ಎಂ.ಸಿ ನೀರು ಸಂಗ್ರಹ ಸಾಮಾಥ್ರ್ಯವಿರುವ ಜಲಾಶಯದಿಂದ ಎಡ ಮತ್ತು ಬಲದಂಡೆ ಕಾಲುವೆ ಮುಖಾಂತರ 7500 ಎಕರೆ ಭೂಮಿಗೆ ನೀರು ಒದಗಿಸಲಿದೆ.
ಸಕಾಲಕ್ಕೆ ಮಳೆಯಾಗುತ್ತಿರುವದರಿಂದ ರೈತರು ಸಂತಸಗೊಂಡಿದ್ದು ಕೃಷಿ ಚಟುವಟಿಕೆಯಲ್ಲಿ ತೊಡಗಿರುವದು ಕಂಡುಬಂದಿದೆ. ಈಗಾಗಲೇ ಭೂಮಿಯನ್ನು ಹದಮಾಡಿಕೊಂಡಿದ್ದು, ಭಿತ್ತನೆ ಕಾರ್ಯಕ್ಕೆ ಬೀಜ ಹಾಗೂ ಗೊಬ್ಬರಗಳನ್ನು ದಾಸ್ತಾನು ಮಾಡಿಕೊಂಡಿದ್ದಾರೆ.

 

Don`t copy text!