ನಡುಗಡ್ಡೆ ಪ್ರದೇಶಗಳಿಗೆ ಎಸಿ ರಾಜಶೇಖರ ಡಂಬಳ ಭೇಡಿ
e-ಸುದ್ದಿ, ಲಿಂಗಸುಗೂರು
ಲಿಂಗಸುಗೂರು ತಾಲೂಕಿನ ಗುರುಗುಂಟ ಹೋಬಳಿಯ ಯರಗೋಡಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕೃಷ್ಣಾ ನದಿ ಪಾತ್ರದಲ್ಲಿರುವ ನಡುಗಡ್ಡೆ ಗಳಾದ ಮಾದಾರ ಗಡ್ಡಿ ,ವೆಂಕಮ್ಮನ ಗಡ್ಡಿ ಗಳಲ್ಲಿ ವಾಸಿಸುವ ಕುಟುಂಬಗಳಿಗೆ ಎಸಿ ರಾಜಶೇಖರ ಡಂಬಳ ಭೇಟಿ ನೀಡಿ ಪ್ರವಾಹ ಕುರಿತು ಮುನ್ನೆಚ್ಚರಿಕೆ ನೀಡಿದರು.
ನದಿಪಾತ್ರದಲ್ಲಿ ನೀರಿನ ಮಟ್ಟ ಅಪಾಯಕಾರಿ ಪೂರ್ವದಲ್ಲಿ ಸುರಕ್ಷಿತ ಸ್ಥಳಗಳಿಗೆ ಬರಲು ಮನವರಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ನಡುಗಡ್ಡೆ ನಿವಾಸಿಗಳ ಕುಂದುಕೊರತೆಗಳನ್ನು ಸಹ ಆಲಿಸಲಾಯಿತು.
ಲಿಂಗಸುಗೂರು ಉಪವಿಭಾಗದ ಸಹಾಯಕ ಆಯುಕ್ತರಾದ ರಾಜಶೇಖರ್ ಡಂಬಳ, ತಹಶೀಲ್ದಾರ್ ಚಾಮರಾಜ ಪಾಟೀಲ್, ಸಿ.ಪಿ.ಐ ಮಹಾಂತೇಶ್ ಸಜ್ಜನ್ , ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಲಕ್ಷ್ಮೀದೇವಿ , ಜೆಸ್ಕಾಂ ಎ.ಇ.ಇ ಸುರೇಶ್, ಜೆಸ್ಕಾಂ ಜೆ.ಇ ನಾಗಪ್ಪ ನಾಯಕ, ಗುರುಗುಂಟಾ ಉಪತಹಶಿಲ್ದಾರ್ ರಂಗಪ್ಪ ನಾಯಕ,ಕಂದಾಯ ನಿರೀಕ್ಷಕ ರಾಘವೇಂದ್ರ,ಗ್ರಾಮ ಲೆಕ್ಕಾಧಿಕಾರಿಗಳು ಕಂದಾಯ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆ ಸಿಬ್ಬಂದಿಯವರು ಹಾಜರಿದ್ದರು.