e-ಸುದ್ದಿ, ಮಸ್ಕಿ
ತಾಲೂಕಿನ ಮಟ್ಟುರು ಗ್ರಾಮದ ಖಾಸಗಿ ಗೋದಾಮಿನಲ್ಲಿ ಅಕ್ರಮವಾಗಿ ಶೇಖರಿಸಿದ್ದ 514 ಚೀಲ ನಕಲಿ ಡಿ.ಎ.ಪಿ ಗೊಬ್ಬರವನ್ನು ತಾಲೂಕು ಕೃಷಿ ಅಧಿಕಾರಿಗಳಾದ ಮಂಜುಳಾ ಬಸರಡ್ಡಿ ಮತ್ತು ಮಹಾಂತೇಶ ಹವಲ್ದಾರ ಬುಧವಾರ ತಡ ರಾತ್ರಿ ವಶಪಡಿಸಿಕೊಂಡ ಘಟನೆ ನಡೆದಿದೆ.
ಜಿಲ್ಲೆಯಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ನಕಲಿ ಗೊಬ್ಬರ ಮಾರಾಟ ಮಾಡುವ ಜಾಲ ಅಸ್ಥಿತ್ವದಲ್ಲಿದೆ. ರೈತರ ಬೆಳೆ ಕೈಗೆಟುಕದೆ ಹಾನಿಗೋಳಗಾಗುತ್ತಿದ್ದರು. ಬುಧವಾರ ಅಕ್ರಮವಾಗಿ ಗೊಬ್ಬರ ದಾಸ್ತಾನು ಮಾಡಿರುವದು ಗಂಗಾವತಿ ಪೋಲಿಸರಿಂದ ಕೃಷಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕ ನಂತರ ವಶಪಡಿಸಿಕೊಂಡಿದ್ದಾರೆ.
ಗಂಗಾವತಿಯಲ್ಲಿ ಅಕ್ರಮವಾಗಿ ನಕಲಿ ಗೊಬ್ಬರ (ಮಣ್ಣು ಮಿಶ್ರಿತ) ತಯಾರಿಸಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಸಿಂಧನೂರು , ಮಸ್ಕಿ ಭಾಗದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು.
ಬುಧವಾರ ಬೆಳಿಗ್ಗೆ ಗಂಗಾವತಿಯಲ್ಲಿ ವಡ್ಡರಹಟ್ಟಿಯ ಸಿದ್ದನಗೌಡ ಅವರಿಗೆ ಸೇರಿದ ಗೋಡಾನಲ್ಲಿ ಪ್ರಶಾಂತ, ರಾಮಚಂದ್ರ ಎನ್ನುವವರು ನಕಲಿ ಡಿಎಪಿ ಗೊಬ್ಬರವನ್ನು ಮಂಗಳ ಕಂಪನಿಯ 50 ಕೆಜಿ. ಚೀಲದಲ್ಲಿ ತುಂಬಿ ಮಾರಾಟ ಮಾಡುತ್ತಿದ್ದರು. ಗಂಗಾವತಿ ಪೊಲೀಸರು ಬಂಧಿಸಿದ ನಂತರ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಥಳಗಳನ್ನು ಬಾಯಿ ಬಿಟ್ಟಿದ್ದಾರೆ.
ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮದಲ್ಲಿ ಸಂಗ್ರಹಿಸಿದ್ದ 514 ಚೀಲ ನಕಲಿ ಗೊಬ್ಬರ ಅಂದಾಜು 6 ಲಕ್ಷ ರೂ ಮೌಲ್ಯದ ಗೊಬ್ಬರ ವಶಪಡಿಸಿಕೊಂಡು ಮಸ್ಕಿಯ ಖಾಸಗಿ ಮಳಿಗೆಯಲ್ಲಿ ಸಂಗ್ರಹಿಸಿ ಶೀಲ್ ಮಾಡಲಾಗಿದೆ ಎಂದು ಕೃಷಿ ಅಧಿಕಾರಿ ಮಹಾಂತೇಶ ಹವಲ್ದಾರ ತಿಳಿಸಿದರು. ಮಸ್ಕಿ ಕೃಷಿ ಸಹಾಯಕ ಅಧಿಕಾರಿ ಶರಣಬಸವ ಇದ್ದರು.