ಬೆಳೆ ಸಂರಕ್ಷಣೆ ರೃತರ ಗುರಿಯಾಗಲಿ – ಬಲವಂತರಾಜ 


e-ಸುದ್ದಿ ಇಳಕಲ್ಲ
ರೃತರು  ಬೇಳೆಗಳನ್ನು ಕೀಟಗಳು ಭಾದಿಸದಂತೆ, ತಮ್ಮ ಬೇಳೆ ಸಂರಕ್ಷಣೆ ಮಾಡಿಕೊಳ್ಳುವುದು ಅವರ ಮೋದಲ ಗುರಿಯಾಗಿರಬೇಕು ಎಂದು ಸಹಾಯಕ ಕೃಷಿ ಅಧಿಕಾರಿ ಬಲವಂತರಾಜ ಕಂಚಿನಕೋಟೆ ತಿಳಿಸಿದರು.
ಅವರು ಇಲಾಖಾ ಕೃಷಿ ಸಂಜೀವಿನಿ ಸಂಚಾರಿ ವಾಹನದೊಂದಿಗೆ ರೃತರ ಹೋಲಗಳಿಗೆ ಹೋಗಿ ಹೆಸರು, ಗೋವಿನ ಜೋಳ, ತೋಗರಿ ಹಾಗು ಇತರ ಬೇಳೆಗಳಿಗೆ ಬರುವ ಕೀಟಗಳ ಬಗ್ಗೆ ರೃತರಿಗೆ ಮಾಹಿತಿ ನೀಡಿ ಆ ಕೀಟಗಳನ್ನು ಕೊಲ್ಲಲು ಎನು ಮಾಡಬೇಕು ಎಂಬುದನ್ನು ತಿಳಿಸಿದರು.
ರೃತರು ಬೇಳೆಯುವ ವಿವಿಧ ಬೇಳೆಗಳಿಗೆ ತಗಲುವ ರೋಗ ಹಾಗು ಕೀಟಗಳ ಬಾಧೆ ನಿರ್ವಹಣೆ ಬಗ್ಗೆ ಹಾಗು ಹೊಲದ ಮಣ್ಣಿನ ಆರೋಗ್ಯದ ಬಗ್ಗೆ ರೃತರಿಗೆ ತಿಳಿಸಿದರು. ಇದೇ ವೇಳೆಯಲ್ಲಿ ಇ ಸ್ಯಾಪ್ ತಂತ್ರಾಂಷದಲ್ಲಿ ರೃತರ ನೊಂದಣಿ ಮಾಡಲಾಯಿತು. ಹಾಗು ಕಬ್ಬಿನ ಲಘು ಪೆÇೀಷಕಾಂಶಗಳ ನಿರ್ವಹಣೆ ಹಾಗು ಗೊಣ್ಣೆ ಹುಳುಗಳ ಹತೋಟಿ ಕ್ರಮಗಳ ಕುರಿತು ಮತ್ತು ಗೋವಿನ ಜೋಳಕ್ಕೆ ಬರುವ ಸೃನಿಕ ಹುಳುವಿನ ಬಾದೆ ಮತ್ತು ನಿರ್ವಹಣೆ, ಮತ್ತು ಹತ್ತಿಯ ಎಲೆ ಕೆಂಪಾಗುವಿಕೆಯ ಹಾಗು ಮುಂಜಾಗ್ರತಾ ರೋಗ ಹತೋಟಿ ಬಗ್ಗೆ ವಿವಿರವಾಗಿ ತಿಳಿಸಲಾಯಿತು.
ಬಾಗಲಕೋಟ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೆಶಕರಾದ ಚೇತನಾ ಪಾಟೀಲ ಇವರ ಆದೇಶದಂತೆ ಇಳಕಲ್ಲ ಹಾಗು ಹುನಗುಂದ ತಾಲೂಕಾ ಕೃಷಿ ಇಲಾಖೆಯ ಸಹಾಯಕ ನಿರ್ದೆಶಕರಾದ ಸಿದ್ದಪ್ಪ ಪಟ್ಟಿಹಾಳ ಇವರ ಮಾರ್ಗದರ್ಶನದಲ್ಲಿ ಇಳಕಲ್ಲ ರೃತ ಸಂಪರ್ಕ ಕೇಂದ್ರದ ಮುಖ್ಯಾಧಿಕಾರಿ ಬಲವಂತರಾಜ ಕಂಚಿನಕೋಟೆ ಇವರ ನೇತ್ರತ್ವದಲ್ಲಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ (ಎಟಿಎಮ್)ಡಿ.ಜಿ.ಚವ್ಹಾಣ, ಹಾಗು ಕೃಷಿ ಸಂಜೀವಿನಿ ವಾಹನದ ತಾಂತ್ರಿಕ ಸಹಾಯಕರಾದ ಮಹಾಂತೇಶ ಕುಂಟೋಜಿ ಹಾಗು ಇಳಕಲ್ಲ ತಾಲೂಕಿನಾದ್ಯಂತ ರೃತರ ಹೋಲಗಳಿಗೆ ಬೇಟಿ ಕೋಟ್ಟು ಬೇಳೆ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.

 

Don`t copy text!