e-ಸುದ್ದಿ ಇಳಕಲ್ಲ
ಕರೋನಾ ರೋಗವು ನಿಯಂತ್ರಣದಲ್ಲಿ ಬರುತಿದ್ದು ಸಾರ್ವಜನಿಕರು ನಿರ್ಲಕ್ಷತೆವಹಿಸದೆ ಅದರ ಬಗ್ಗೆ ಜಾಗ್ರುತರಾಗಿರಬೇಕು ಎಂದು ಲೈಯನ್ಸ್ ಕ್ಲಬ್ ಅದ್ಯಕ್ಷ ಪ್ರಮೋದ ಹಂಚಾಟೆ ತಿಳಿಸಿದರು.
ಅವರು ಗುರುವಾರದಂದು ಇಳಕಲ್ಲ ನಗರದ ವೃದ್ಯರ ಹಾಗು ಸಾರ್ವಜನಿಕರ ಮದ್ಯ ವೇಬ್ ಸೇಮಿನಾರ ಎರ್ಪಡಿಸಿ ಅದರ ಅದ್ಯಕ್ಷತೆ ವಹಿಸಿ ಮಾತನಾಡಿ ನಾವು ಎಷ್ಟೆ ಎಚ್ಚರವಹಿಸಿದರು ರೋಗ ಹಬ್ಬುವ ಸಾದ್ಯತೆ ಹೆಚ್ಚು ಅದಕ್ಕಾಗಿ ಸಾರ್ವಜನಿಕರಲ್ಲಿಬ್ಮನವಿ ಮಾಡಿದರು. ನಿಮ್ಮೆಲ್ಲರ ಆರೋಗ್ಯ ನಿಮ್ಮ ಕೃಯಲ್ಲಿ ಎಂಬಂತೆ ನೀವು ನಿಮ್ಮ ಮಕ್ಕಳು ಹಾಗು ನಿಮ್ಮ ಕುಟುಂಬ ಸುರಕ್ಷತೆಯಾಗಿ ಇರಲಿ ಎಂದರು. ಈ ವೇಬ್ ಸೇಮಿನಾರದಲ್ಲಿ ಮಾರ್ಗದರ್ಶನ ಮಾಡಿದ ವೃದ್ಯರಾದ ಡಾ.ರಾಘವೇಂದ್ರ ವನಕಿ. ಡಾ:ವಿಠಲ ಶ್ಯಾವಿ, ಡಾ:ಶೋಭಾ ಕಡಪಟ್ಟಿ, ಡಾ:ವಿರಣ್ಣ ಲೋಕಾಪುರ ಹಾಗು ಇತರರು ಕರೋನಾರ ರೋಗ ನಿರ್ಮೂಲನೆ ಹಾಗು ರೋಗ ಬಾರದಂತ್ತೆ ಮುಂಜಾಗ್ರತೆ ಮಾಡಿದ ವೃದ್ಯರಿಗೆ ಅಭಿನಂದಿಸಿದರು.
ಈ ವೇಬ್ ಸೇಮಿನಾರದಲ್ಲಿ ಲಯನ್ಸ್ ಕ್ಲಬ್ ಸಂಸ್ಥೆಯ ಕಾರ್ಯದರ್ಶಿ ಪೆÇ್ರೀ.ಎಸ್.ಸಿ.ಜುಂಜಾ, ಡಾ:ಸಂತೋಷ ಪೂಜಾರ, ವಿಜಯ ಕಾರ್ಕಳ, ರಾಜು ಕಾಟವಾ, ಬಸವರಾಜ ಮಠದ, ಎಕನಾಥ ರಾಜೋಳ್ಳಿ, ಪಾಷಾ ಶಿವನಗುತ್ತಿ, ಶರಣು ಸಮತರ ಹಾಗು ಇತರರು ಉಪಸ್ಥಿತರಿದ್ದರು.