e-ಸುದ್ದಿ, ಮಸ್ಕಿ
ತಾಲೂಕಿನ ಅಂಕುಶದೊಡ್ಡಿ ಗ್ರಾ.ಪಂ.ವ್ಯಾಪ್ತಿಯ ಹೂವಿನಬಾವಿ ಸಿಮಾಂತರದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮುದಬಾಳ ಗ್ರಾಮದ ಕೂಲಿ ಕಾರ್ಮಿಕರು ಸಸಿ ನೆಡಲು ಗುಂಡಿಗಳನ್ನು ಅಗೆಯುವ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಆರೋಗ್ಯ ಅಧಿಕಾರಿಗಳು ಆಗಮಿಸಿ ಕೂಲಿ ಕಾರ್ಮಿಕರಿಗೆ ಕರೊನಾ ತಡೆಗಟ್ಟುವ ಲಸಿಕೆ ಹಾಕಿದರು.
ಆರೋಗ್ಯ ಇಲಾಖೆ, ಗ್ರಾಮ ಪಂಚಾಯತಿ ಮತ್ತು ಕಂದಾಯ ಅಧಿಕಾರಿಗಳು ನರೇಗಾ ಕೆಲಸ ನಡೆಯುತ್ತಿರುವ ಸ್ಥಳಕ್ಕೆ ಗುರುವಾರ ಆಗಮಿಸಿ ಕೂಲಿ ಕಾರ್ಮಿಕರಿಗೆ ತಿಳಿ ಹೇಳಿ 50 ಜನರಿಗೆ ಲಸಿಕೆ ಹಾಕಿದರು.
ಗ್ರಾಮೀಣ ಭಾಗದಲ್ಲಿ ಲಸಿಕೆ ಹಾಕಲು ತಿಳಿ ಹೇಳಿದರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅದಕ್ಕಾಗಿ ಅಧಿಕಾರಿಗಳು ನರೇಗಾ ಕೆಲಸ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿ ಲಸಿಕೆ ಹಾಕಲು ಮುಂದಾಗಿದ್ದಾರೆ.
ನರೇಗಾ ಸಹಾಯಕ ನಿರ್ದೆಶಕ ಮಂಜುನಾಥ ಜಾವೂರು, ತಾ.ಪಂ.ಇಒ ಬಾಬು ರಾಠೋಡ, ಅಂಕುಶದೊಡ್ಡಿ ಗ್ರಾ.ಪಂ.ಪಿಡಿಒ ಸುರೇಶ ಕನ್ನಾಳ, ಸಂತೆಕೆಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ಆಯುಷ್ಯ ವೈದ್ಯಾಧಿಕಾರಿ ಶ್ರೀದೇವಿ ಹಿರೇಮಠ, ಶೃತಿ ಪಟ್ಟಣಶಟ್ಟಿ, ಶಂಕ್ರಮ ನಾಗರಾಳ, ಪಿ.ವೀರೇಶ, ಅಂಗನವಾಡಿ ಕಾರ್ಯಕರ್ತೆ ಶಿವಲೀಲಾ, ಆಶಾ ಕಾರ್ಯಕರ್ತೆ ವಿಜಯಲಕ್ಷ್ಮೀ, ವಿರುಪಣ್ಣ ಅಂಕುಶದೊಡ್ಡಿ ಹಾಗೂ ಇತರರು ಭಾಗವಹಿಸಿದ್ದರು.