e-ಸುದ್ದಿ, ಮಸ್ಕಿ
ಕಳೆದ ಎರಡು ದಿನಗಳಿಂದ ಹುಚ್ಚು ಮಂಗವೊಂದು ಸಿಕ್ಕ ಸಿಕ್ಕವರನ್ನು ಕಚ್ಚುತ್ತಿರುವ ಘಟನೆ ಮಸ್ಕಿ ಪಟ್ಟಣದಲ್ಲಿ ನಡೆದಿದೆ. ಮಲ್ಲಿಕಾರ್ಜುನ ದೇವಸ್ಥಾನದ ಬಳಿ ಭಾನುವಾರ ಸಂಜೆ ಮಕ್ಕಳು ಆಟವಾಡುತ್ತಿದ್ದಾಗ ಮಂಗ ಒಂದು ಹಾರಿ ಬಂದು ಮಕ್ಕಳಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಜರುಗಿತ್ತು.
ಸೋಮವಾರ ಕೂಡ ಇದೇ ಮಂಗ ಪೊಲೀಸ್ ಕ್ವಾಟ್ರಸ್ ಹಾಗೂ ತಾಲೂಕು ಪಂಚಾಯತಿ ಹತ್ತಿರ ಇರುವ ಗಿಡದಲ್ಲಿ ಆಶ್ರಯಿಸಿಕೊಂಡಿದ್ದು ರಸ್ತೆ ಮೇಲೆ ಹೋಗುತ್ತಿರುವ ಪಾದಚಾರಿಗಳಿಗೆ ಕಚ್ಚುತ್ತಿರುವದು ಕಂಡು ಬಂದಿದೆ.
ಏಕಾಏಕಿಯಾಗಿ ಹಾರಿಬಂದು ಮಂಗ ಕಚ್ಚುತ್ತಿರುವದರಿಂದ ಜನರು ಬೆಚ್ಚಿಬಿದ್ದಿದ್ದಾರೆ. ಮಂಗನಿಂದ ಕಚ್ಚಿಸಿಕೊಂಡವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕೈ ಮತ್ತು ಕಾಲುಗಳಿಗೆ ಗಾಯಗಳಾಗಿವೆ.
ಈ ಕುರಿತು ಸ್ಥಳಿಯರು ಅರಣ್ಯ ಇಲಾಖೆಗೆ ಮಾಹಿತಿ ಮಾಡಿದ್ದು ಅರಣ್ಯ ಇಲಾಖೆಯವರು ಮಂಗ ಹಿಡಿಯಲು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.