ಲಿಂಗಸುಗೂರಿನಲ್ಲಿ ಕೌಶಲ್ಯ ತರಬೇತಿ
e-ಸುದ್ದಿ, ಲಿಂಗಸೂಗೂರು
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ (ರಿ) ಕಲಬುರ್ಗಿ ಮತ್ತು ಗ್ರಾಮ್ಸ್ ಸಂಸ್ಥೆ ಲಿಂಗಸೂಗೂರು ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಲಿಂಗಸೂಗೂರಿನ ಗ್ರಾಮ್ಸ್ ಸಂಸ್ಥೆಯಲ್ಲಿ ತಾಲೂಕಿನ ಗ್ರಾಮ ಪಂಚಾಯಿತಿವಾರು ಹೋಲಿಗೆ ತರಬೇತಿ ನೀಡುವ ಕೌಶಲ್ಯ ಕೇಂದ್ರ ಶಿಕ್ಷಕಿಯರ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರ್ದೇಶಕರಾದ ಈರೇಶ್ ಇಲ್ಲೂರು ವಹಿಸಿದ್ದರು. ಉಧ್ಘಾಟಕರಾಗಿ ವಿಕಾಸ ಅಕಾಡೆಮಿ ಸದಸ್ಯರಾದ ಶ್ರೀ ಗವಿಸಿದ್ದಪ್ಪ ಸಾಹುಕಾರ್ ಆಗಮಿಸಿದ್ದರು.ಮುಖ್ಯ ಅಥಿತಿಗಳಾಗಿ ಗ್ರಾಮ್ಸ್ ಸಂಸ್ಥೆಯ ಅಧ್ಯಕ್ಷರಾದ ಸೂಗುರಯ್ಯ ಸ್ವಾಮಿ ,ಹಾಗೂ ಪುರಸಭೆಯ ನಾಮ ನಿರ್ದೇಶಿತ ಸದಸ್ಯ ಚನ್ನಬಸವ ಹಿರೇಮಠ,ಹಾಗೂ ಗ್ರಾಮ್ಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಚಾಂದಬಿ ಬೇಗಂ ಆಗಮಿಸಿದ್ದರು ,ಹಾಗೂ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಘದ ತಾಲೂಕು ಸಂಯೋಜಕರು ಸೃಜನದಿಪ್ತಿ ಶಿಬಿರ ಸಂಯೋಜಕರು,ಹಾಗೂ ಕೌಶಲ್ಯ ಕೇಂದ್ರ ತರಬೇತಿ ದಾರರು ಈ ಸಂದರ್ಭದಲ್ಲಿ ಹಾಜರಿದ್ದರು.