ಟ್ಯಾಬ್ ವಿತರಣೆ, ಕಾಲೇಜು ಅಭಿವೃದ್ದಿ ಸಮಿತಿ ಕಡೆಗಣನೆ
ವಿದ್ಯಾರ್ಥಿಗಳು ಕೊವಿಡ್ ನಿಂದ ಜಾಗೃತರಾಗಿರಿ- ಶಾಸಕ ಬಸನಗೌಡ ತುರ್ವಿಹಾಳ
e-ಸುದ್ದಿ, ಮಸ್ಕಿ
ಸತತವಾಗಿ ಎರಡು ವರ್ಷಗಳಿಂದ ಕರೊನಾ ಕಾಡುತ್ತಿದ್ದು ಇದರಿಂದ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ ಎಂದು ಶಾಸಕ ಬಸನಗೌಡ ತುರ್ವಿಹಾಳ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ದೇವನಾಂಪ್ರಿಯ ಪದವಿ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿ ಮಾತನಾಡಿದರು. ಸರ್ಕಾರ ಎಲ್ಲಾ ವಿದ್ಯಾರ್ಥಿಗಳಿಗೆ ಟ್ಯಾಬ್ ಕೊಡುತ್ತಿದ್ದು ಪಾಠಗಳನ್ನು ಆನ್ ಲೈನ್ ಮೂಲಕ ಅಭ್ಯಾಸ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಬಸನಗೌಡ ತುರ್ವಿಹಾಳ ತಿಳಿಸಿದರು.
ಕರೊನಾ 3ನೇ ಹಂತದ ಅಲೆ ಹರಡುವ ಎಚ್ಚರಿಕೆಯನ್ನು ತಜ್ಞರು ವರದಿ ನೀಡಿದ್ದು ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿ, ವಿದ್ಯಾರ್ಥಿಗಳು ಭಯಪಡೆದೆ ಲಸಿಕೆ ಪಡೆದುಕೊಳ್ಳುವಂತೆ ಶಾಸಕರು ತಿಳಿಸಿದರು.
ಇದೇ ಸಂದರ್ಭದಲ್ಲಿ ಸ್ಮಾರ್ಟ ಕೊಠಡಿಗಳನ್ನು ಶಾಸಕ ಬಸನಗೌಡ ತುರ್ವಿಹಾಳ ಉದ್ಘಾಟಿಸಿದರು. ಪ್ರಾಚಾರ್ಯ ಪಂಪನಗೌಡ ಗುರಿಕಾರ, ಉಪನ್ಯಾಸಕ ಶಿವಗ್ಯಾನಪ್ಪ ಮಾತನಾಡಿದರು.
—————————————————————————————
ಕಾಲೇಜು ಅಭಿವೃದ್ದಿ ಸಮಿತಿ ಕಡೆಗಣನೆ
ಟ್ಯಾಬ್ ವಿತರಣೆ ಕಾರ್ಯಕ್ರಮಕ್ಕೆ ಕಾಲೇಜು ಅಭಿವೃದ್ದಿ ಸಮಿತಿಯವರನ್ನು ಕಡೆಗಣಿಸಿದ್ದು ಕಾರ್ಯಕ್ರಮಕ್ಕೆ ಪ್ರಚಾರ್ಯರು ಆಹ್ವಾನಿಸದಿರುವ ಘಟನೆ ನಡೆದಿದೆ.
ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕಾಲೇಜು ಅಭಿವೃದ್ದಿ ಸಮಿತಿಯ ಕಾರ್ಯಧ್ಯಕ್ಷರನ್ನು ಕರೆಯುವದು ಸಂಪ್ರದಾಯ. ಆದರೆ ಈ ಬಾರಿ ಪ್ರಚಾರ್ಯರು ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರನ್ನು ಕಡೆಗಣಿಸಿದ್ದು ಎದ್ದು ಕಾಣುತ್ತಿತ್ತು.
————————–
ಕಾಲೇಜಿಗೆ ಆಡಳಿತ ಮಂಡಳಿ ಇಲ್ಲ. ಆಡಳಿತ ಮಂಡಳಿಯ ಅವಧಿ ಮುಗಿದಿದೆ. ಹಾಗಾಗಿ ಅವರನ್ನು ಕರೆದಿಲ್ಲ.
-ಪಂಪಾಪತಿ ಪ್ರಚಾರ್ಯ, ದೇವನಾಂಪ್ರಿಯ ಸರ್ಕಾರಿ ಪದವಿ ಕಾಲೇಜು, ಮಸ್ಕಿ