e-ಸುದ್ದಿ, ಮಸ್ಕಿ
ಸುದ್ದಿ, ಮಸ್ಕಿಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಜನ ಸಂಘದ ಸಂಸ್ಥಾಪಕ ಡಾ.ಶ್ಯಾಂಪ್ರಕಾಶ ಮುಖರ್ಜಿ ಅವರ ಪುಣ್ಯತಿಥಿ ಆಚರಿಸಲಾಯಿತು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರು ಡಾ.ಶ್ಯಾಂಪ್ರಕಾಶ ಮುಖರ್ಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ನಂತರ ಬಿಜೆಪಿ ಕಚೇರಿಯಲ್ಲಿ ಬೂತ ಮಟ್ಟದ ವೃಕ್ಷ ಅಭಿಯಾನದ ಅಂಗವಾಗಿ ಸಸಿ ನೆಟ್ಟು ಚಾಲನೇ ನೀಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಪ್ಪಾಜಿಗೌಡ ಪಾಟೀಲ, ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಮುಖಂಡರಾದ ಅಂದಾನಪ್ಪ ಗುಂಡಳ್ಳಿ, ತಾ.ಪಂ.ಸದಸ್ಯ ಗವಿಸಿದ್ದಪ್ಪ ಸಂತೆಕೆಲ್ಲೂರು, ಶರಣಬಸವ ವಕೀಲ, ಶಿವಪ್ಪ ಮಸ್ಕಿ, ಯಲ್ಲೋಜಿರಾವ್ ಕೊರೆಕರ್, ಜಿ.ವೆಂಕಟೇಶ, ಶರಣಯ್ಯ ಸೊಪ್ಪಿಮಠ, ಅಭಿಜಿತ್ ಮಾಲಿಪಾಟೀಲ, ಶರಣಯ್ಯ ಗುಡದೂರು,ಮೌನೇಶ ಮುರಾರಿ, ಶರಣಬಸವ ಹರವಿ, ಶೇಖರಗೌಡ ಕಾಟಗಲ್ ಹಾಗೂ ಇತರರು ಭಾಗವಹಿಸಿದ್ದರು