ಪ್ರಗತಿ ಕೇಂದ್ರಗಳ ತರಬೇತಿ ಕಾರ್ಯಕ್ರಮ ಉದ್ಘಾಟನೆ 

ಪ್ರಗತಿ ಕೇಂದ್ರಗಳ ತರಬೇತಿ ಕಾರ್ಯಕ್ರಮ ಉದ್ಘಾಟನೆ 

e-ಸುದ್ದಿ, ಲಿಂಗಸುಗೂರು

ಲಿಂಗಸೂಗೂರಿನಲ್ಲಿ ಪ್ರಗತಿ ಕೇಂದ್ರಗಳ ತರಬೇತಿ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟನೆ ನೆರವೇರಿತು. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ (ರಿ) ಕಲಬುರ್ಗಿ ಮತ್ತು ಗ್ರಾಮ್ಸ್ ಸಂಸ್ಥೆ ಲಿಂಗಸೂಗೂರು ಇವರ ಸಂಯುಕ್ತ ಆಶ್ರಯದಲ್ಲಿ  ಲಿಂಗಸೂಗೂರಿನ ಆಪಲ್ ಟ್ರಿ ಶಾಲೆಯಲ್ಲಿ ತಾಲೂಕಿನ ಗ್ರಾಮಗಳ ವಾರು ಪ್ರಗತಿ ಕೇಂದ್ರಗಳ ತರಬೇತಿ ನೀಡುವ ಸಂಪನ್ಮೂಲ ಶಿಕ್ಷಕಿಯರ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಲಾಯಿತು.

ಗ್ರಾಮ್ಸ್ ಸಂಸ್ಥೆಯ ಸೂಗುರಯ್ಯ ಸ್ವಾಮಿ ಮಾತನಾಡಿ ಪ್ರಗತಿ ಕೇಂದ್ರಗಳು ಗ್ರಾಮಗಳಲ್ಲಿ ಯಾವ ರೀತಿ ನಡೆಯಬೇಕು ಬೋಧನಾ ಮಾಧ್ಯಮ ಯಾವ ರೀತಿ ಇರಬೇಕು ಎಂಬುದರ ಕುರಿತು ಸವಿಸ್ತಾರವಾಗಿ ವಿವರಣೆ ನೀಡಿದರು.

ವಿಕಾಸ ಅಕಾಡೆಮಿ ತಾಲೂಕು ಸಂಚಾಲಕರಾದ ಗವಿಸಿದ್ದಪ್ಪ ಸಾಹುಕಾರ ರವರು ಮಾತನಾಡಿ ಕಲ್ಯಾಣ ಕರ್ನಾಟಕದ ಭಾಗದ ಪ್ರಗತಿಗಾಗಿ ಪ್ರತಿಯೊಬ್ಬ ರು ತಮ್ಮ ಸೇವೆಯನ್ನು ಸಲ್ಲಿಸಬೇಕಾಗಿದೆ ಎಂದರು. ಆಪಲ್ ಟ್ರೀ ಶಾಲೆಯ ಆಡಳಿತಾಧಿಕಾರಿಗಳಾದ ಸುಷ್ಮಾ ಮೇಟಿ ಮೇಡಂ ಭಾರತಿಯ ಸಂಸ್ಕೃತಿ ಹಾಗೂ ಪರಂಪರೆ ಮಹಿಳೆ ಜವಾಬ್ದಾರಿಗಳು ಕುರಿತು ವಿವರಣೆ ನೀಡಿದರು.

ಲಿಂಗಸೂಗೂರಿನ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರಾದ ಜಂಬಯ್ಯ ಸ್ವಾಮಿ ಹಾಗೂ ಆಪಲ್ ಟ್ರೀ ಶಾಲೆಯ ಆಡಳಿತಾಧಿಕಾರಿಗಳಾದ ಸುಷ್ಮಾ ಮೇಟಿಯವರು ಭಾಗವಹಿಸಿದ್ದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಸಾಂಸ್ಕೃತಿಕ ಸಂಘದ ತಾಲೂಕು ಸಂಯೋಜಕರಾದ ಮಂಜುನಾಥ ಬ್ಯಾಗವಾಟ, ರಮೇಶ ಹೆಳವರ ಮಾವಿನಬಾವಿ,ವೀರೇಶ ಅಂಗಡಿ, ನಾಗರಾಜ್ , ಸುನಿಲ್ , ಸುನೀತಾ ಪಾಟೀಲ್,ಪ್ರಿಯಾಂಕ, ಹಾಗೂ ಸೃಜನ ದಿಪ್ತಿ ಶಿಬಿರ ಸಂಯೋಜಕರಾದ ಯಾಸ್ಮಿನ್,ಚಂದ್ರಕಲಾ ಹಾಗೂ ಪ್ರಗತಿ ಕೇಂದ್ರ ತರಬೇತಿದಾರರು ಹಾಜರಿದ್ದರು.

Don`t copy text!