ಕರಡಿ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರ ಉದ್ಘಾಟನೆ

ಕರಡಿ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಭೂಮಿ ಪೂಜೆ

e-ಸುದ್ದಿ, ಇಲಕಲ್ಲ

ಇಲಕಲ್ಲ ಗ್ರಾಮೀಣ ಪೊಲೀಸ್ ಠಾಣಾ ಸರಹದ್ದಿನ ಕರಡಿ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರದ ಕಟ್ಟಡ ಉದ್ಘಾಟನೆ ಕಾರ್ಯಕ್ರಮವನ್ನು ಹುನಗುಂದ ಮತಕ್ಷೇತ್ರದ ಶಾಸಕರಾದ ಶ್ರೀ ದೊಡ್ಡನಗೌಡ ಪಾಟೀಲ್ ನೆರವೇರಿಸಿದರು.

ಅಂದಾಜು 50 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡದ ಉದ್ಘಾಟನೆಗೊಂಡಿದ್ದು, ಸದರಿ ಕಾರ್ಯಕ್ರಮದಲ್ಲಿ ಶ್ರೀ ಸಿದ್ದಣ್ಣ ಪಟಿಯಾಳ ಅಸಿಸ್ಟೆಂಟ್ ಡೈರೆಕ್ಟರ್ ರೈತ ಸಂಪರ್ಕ ಕೇಂದ್ರ ಹುನುಗುಂದ, ಶ್ರೀ ಜಿ ಎಂ ಹಿರೇಮಠ ಕೃಷಿ ಅಧಿಕಾರಿಗಳು ಕರಡಿ, ಶ್ರೀ ಬಸವರಾಜ ತಿಪ್ಪಾರೆಡ್ಡಿ ಇಳಕಲ್ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ  ಹಾಗೂ ಕರಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ನಾಗವ್ವ ಬಸಪ್ಪ ಗೌಂಡಿ, ಉಪಾಧ್ಯಕ್ಷರಾದ ಬಸವರಾಜ್ ಮುದುಗಲ್ ಹಾಗೂ ಹಲವಾರು ಭಾಗವಹಿಸಿದ್ದರು.

Don`t copy text!