ಶೋಷಣೆ

 

(ಕಥನ ಕವನ )

ಶೋಷಣೆ

ಸೀತಾ ಎನ್ನುವ ಜನಪ್ರಿಯ ವೈಧ್ಯೆ
ಬಾಳ ಬೇಕೆಂದಿದ್ದಳು ವಿಶ್ವವನೇ ಗೆದ್ದು
ಕನಸು ಕಂಗಳಲಿ ವಿದೇಶ ಪ್ರವಾಸ
ಆಶೆ ಕೊರಳಿಗೆ ಬಿತ್ತು ಪ್ರೇಮ ಪಾಷ
ಸಂಭ್ರಮಿಸದಳು ಪ್ರೇಮಿಯದು ಅವಳದೇ ದೇಶ

ಹಬ್ಬಿತು ಲತೆ ಮರವ ತಬ್ಬಿ
ಅರಳಿತು ಹೂ ಲತೆಯ ತಬ್ಬಿ
ಮೈ ಮರೆತು ಮಾಡಿದಳು ಬಾಷಣ
ನಾನೆಂದು ಸಹಿಸೆನು ಶೋಷಣೆ
ಅರಿಯದೆ ತನಗಾಗುತ್ತಿದ್ದ ವಂಚನೆ

ತಾಯ್ನಾಡಿಗೆ ಬಂದ ಸಂಭ್ರಮವು
ಅಳಿಸಿತ್ತು ಅವಳಿಗಾದ ಮೋಸವು
ಪತಿಗಿತ್ತು ಇನ್ನೊಂದು ಸಂಸಾರವು
ಅವಳಿಗಿಲ್ಲವಾಯ್ತು ಯಾವುದೇ ತಾವು
ಸಿಗಲೇ ಇಲ್ಲ ಪುತ್ರನಾ ಮಮಕಾರವು

ರೋಗಿಗಳಿಗೆ ನೀಡುತ್ತಿದಳು ಸಾಂತ್ವನ
ಹೃದಯದಲಿ ತುಂಬಿತ್ತು ರೋದನ
ನೋಡ ಬಯಸಿದರೂ ಕಂದನ ಸಾಧ್ಯವಾಗದೆ ನೊಂದಿತು ಮನ
ನಿಟ್ಟುಸಿರಲಿ ನಿಂತಿತವಳ ಉಸಿರು

ಆಗಲು ಬರಲಿಲ್ಲ ಪತಿ ಪುತ್ರರು
ಧೀರೆಯ ಕಥೆ ವಿಷಾದದ ವ್ಯಥೆ.

ಮಂಜುಳಾ ಬನ್ನಿಗೋಳಮಠ ಇಲಕಲ್

 

Don`t copy text!