ಗಜಲ್

ಗಜಲ್

 

ಕಂಗಳು ಮುಚ್ಚಿದರೂ ನಿನ್ನದೆ ರೂಪ ತೆರೆದರೂ ನಿನ್ನದೇ..
ಹೃದಯ ಬಡಿದರೂ ನಿನ್ನದೆ ಪಾಲು ನಿಲ್ಲಿಸಿದರೂ ನಿನ್ನದೇ..

ಗಡಿಯಾರದ ಮುಳ್ಳುಗಳನ್ನು ಶಪಿಸುತಿದ್ದೆ ನೀ ಜೊತೆಗಿರಲು
ಕಾಲ ಸಿಹಿಯಾದರೂ ನಿನ್ನದೆ ಪಾತ್ರ ವಿಷವಾದರೂ ನಿನ್ನದೇ..

ನಿನ್ನ ಸಾಂಗತ್ಯದಿ ನಾನು ನೆಪ ಮಾತ್ರ ಮಧುರ ಗಳಿಗೆಗಳಿಗೆ
ಯಶಸ್ಸಿನ ಕೀರ್ತಿಯೂ ನಿನ್ನದೆ ಸೋಲಾದರೂ ನಿನ್ನದೇ..

ನೀ ಹೆಜ್ಜೆ ಇಟ್ಟಲೆಲ್ಲಾ ನಾಕದ ಕಂಪು ಪಸರಿಸುವುದು ರಾಣಿ
ನನಗೆ ತೃಪ್ತಿಯ ಮಡಿಲೂ ನಿನ್ನದೆ ನೋವಾದರೂ ನಿನ್ನದೇ..

‘ಮಲ್ಲಿ’ಯ ಮೈ ಮನವು ಉಸಿರಾಡುತಿರುವುದು ನಿನ್ನಿಂದಲೇ
ನನ್ನಯ ಪರಿಪೂರ್ಣ ಬಾಳು ನಿನ್ನದೆ ಸಾವಾದರೂ ನಿನ್ನದೇ..

 

✍️ರತ್ನರಾಯಮಲ್ಲ

Don`t copy text!