ಮಸ್ಕಿ ತಾಲೂಕಿನ ಜಿಪಂ, ತಾಪಂ ಮೀಸಲಾತಿ ಪ್ರಕಟ, ಕಣಕ್ಕಿಳಿಯ ತೆರೆಮರೆಯಲ್ಲಿ ತಾಲಿಮು ಶುರು!


e-ಸುದ್ದಿ, ಮಸ್ಕಿ
ಮಸ್ಕಿ ಕ್ಷೇತ್ರದ ಉಪಚುನಾವಣೆ ಮುಗಿದು ಮೂರು ತಿಂಗಳು ಕಳೆಯುವುದರೊಳಗಾಗಿ ಇದೀಗ ರಾಜ್ಯ ಚುನಾವಣಾ ಆಯೋಗ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದ ಬೆನ್ನ ಹಿಂದೆಯೇ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಳ್ಳುವ ಸಾದ್ಯತೆಗಳು ಹೆಚ್ಚಾಗಿವೆ.
ಮಸ್ಕಿ ನೂತನ ತಾಲ್ಲೂಕು ಕೇಂದ್ರವಾದ ನಂತರ ಇದೇ ಮೊದಲ ಬಾರಿಗೆ 6 ಜಿಲ್ಲಾ ಪಂಚಾಯಿತಿ ಹಾಗೂ 13 ತಾಲ್ಲೂಕು ಪಂಚಾಯಿತಿ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದರಿಂದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಈ ಚುನಾವಣೆ ಮಹತ್ವ ಪಡೆದುಕೊಂಡಿದೆ.
ಆಕಾಂಕ್ಷಿಗಳ ಪೈಪೋಟಿ: ಜಿಪಂ ತಾಪಂನಲ್ಲಿ ಸ್ಪರ್ದೇ ಮಾಡಲು ಮೀಸಲಾತಿ ಪಟ್ಟಿ ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಪಕ್ಷಗಳ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಆಕಾಂಕ್ಷಿಗಳು ಎಂದು ಸಂದೇಶ ಹರಿ ಬಿಟ್ಟು ಜನ ಬೆಂಬಲ ಕೇಳುವ ಮೂಲಕ ಸ್ಪರ್ಧಿಸುವ ಇಚ್ಚೆ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಒಂದೇ ಪಕ್ಷದಿಂದ ಒಂದೇ ಕ್ಷೇತ್ರದಿಂದ ಎರಡ್ಮೂರು ಅಭ್ಯರ್ಥಿಗಳು ಆಕಾಂಕ್ಷಿಗಳು ಪೈಪೋಟಿ ನಡೆಸುತ್ತಿರುವ ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಎರಡು ಪಕ್ಷಗಳ ಆಕಾಂಕ್ಷೆಗಳ ಜೊತೆಗೆ ಪಕ್ಷಕ್ಕೆ ಸೇರದೆ ಇರುವ ಕೆಲವು ಯುವಕರು ಸಹ ತಮ್ಮ ಕ್ಷೇತ್ರದ ಮೀಸಲಾತಿ ಪಟ್ಟಿಯನ್ನು ಪೆÇೀಸ್ಟ್ ಮಾಡುವ ಮೂಲಕ ನಾನು ಈ ಕ್ಷೇತ್ರದ ಸ್ಪರ್ಧಿ ಎಂಬುದನ್ನು ಖಚಿತಪಡಿಸುವ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸುತ್ತಿದ್ದಾರೆ.
ಚುನಾವಣೆ ಆಯೋಗ ಚುನಾವಣೆ ದಿನಾಂಕ ಫೋಷಣೆ ಮಾಡುವ ಮುನ್ನವೇ ಪ್ರಕಟವಾದ ಮೀಸಲಾತಿ ಪಟ್ಟಿಯಿಂದ ಕ್ಷೇತ್ರದಲ್ಲಿ ಸಂಚಲನ ಮೂಡಿದ್ದು ಬರುವ ದಿನಗಳಲ್ಲಿ ಪಕ್ಷಗಳ ಟಿಕೇಟ್ ಯಾರು ಗಿಟ್ಟಿಸಿಕೊಳ್ಳತ್ತಾರೆ ಎಂದು ಪೈಪೆÇೀಟಿ ನಡೆಯುವ ಲಕ್ಷಣಗಳು ಈಗಲೇ ಸ್ಪಷ್ಟವಾಗಿ ಕಂಡು ಬರುತ್ತಿದೆ.
———————————

ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಬಲಿಷ್ಟವಾಗಿದೆ. ಉಪ ಚುನಾವಣೆಯಂತೆಯೇ ಜಿಪಂ, ತಾಪಂ ಚುನಾವಣೆ ಎದುರಿಸಲು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪಕ್ಷ ಸನ್ನದ್ಧವಾಗಿದೆ. ಅತಿ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂಬ ವಿಶ್ವಾಸ ಇದೆ.
ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಅದ್ಯಕ್ಷರು ನಗರ ಬ್ಲಾಕ್ ಕಾಂಗ್ರೆಸ್ ಮಸಿ.್ಕ
———————-

ಕ್ಷೇತ್ರದಾದ್ಯಂತ ಸಂಚಾರ ಮಾಡಿ ಪ್ರತಿಯೊಬ್ಬ ಕಾರ್ಯಕರ್ತರನ್ನು ಬೇಟಿಯಾಗಿ ಪಕ್ಷ ಸಂಘಟನೆ ಮಾಡಿರುವುದರಿಂದ ಯಾವುದೇ ಕ್ಷಣದಲ್ಲಿ ಚುನಾವಣೆ ನಡೆದರೂ ಸಹ ಬಿಜೆಪಿ ಚುನಾವಣೆ ಎದುರಿಸಲು ಸಿದ್ಧವಾಗಿದ್ದು ಕಾಂಗ್ರೆಸ್‍ಗೆ ತಕ್ಕ ಉತ್ತರ ನೀಡಲಿದ್ದೇವೆ.
-ಶಿವಪುತ್ರಪ್ಪ ಅರಳಹಳ್ಳಿ.ಅಧ್ಯಕ್ಷರು, ಬಿಜೆಪಿ ಮಂಡಲ ಮಸ್ಕಿ
—————————–

ಜಿಲ್ಲಾ ಪಂಚಾಯಿತಿ ಕ್ಷೇತ್ರ
1. ವಿರುಪಾಪೂರ (ತಿಡಿಗೋಳ) (ಅನುಸೂಚಿತ ಜಾತಿ)
2. ತೋರಣದಿನ್ನಿ (ಸಾಮಾನ್ಯ)
3. ಸಂತೆಕೆಲ್ಲೂರು (ಸಾಮಾನ್ಯ)
4. ಪಾಮನಕೆಲ್ಲೂರು (ಅನುಸೂಚಿತ ಜಾತಿ ಮಹಿಳೆ)
5. ಮೆದಿಕಿನಾಳ (ಅನುಸೂಚಿತ ಪಂಗಡ)
6. ಗೌಡನಭಾವಿ (ಸಾಮಾನ್ಯ ಮಹಿಳೆ)

ತಾಪಂ ಪಂಚಾಯಿತಿ ಕ್ಷೇತ್ರ
1 ಹಿರೇದಿನ್ನಿ (ಸಾಮಾನ್ಯ ಮಹಿಳೆ)
2. ತೋರಣದಿನ್ನಿ (ಅನುಸೂಚಿತ ಪಂಗಡ –ಮಹಿಳೆ)
3. ಮಟ್ಟೂರು (ಸಾಮಾನ್ಯ)
4 ಸಂತೆಕೆಲ್ಲೂರು (ಸಾಮಾನ್ಯ ಮಹಿಳೆ)
5 ಅಡವಿಭಾವಿ-ಮಸ್ಕಿ (ಸಾಮಾನ್ಯ)
6 ಮಾರಲದಿನ್ನಿ (ಅನುಸೂಚಿತ ಜಾತಿ)
7 ಪಾಮನಕೆಲ್ಲೂರು (ಸಾಮಾನ್ಯ)
8 ಹಾಲಾಪೂರು (ಅನುಸೂಚಿತ ಪಂಗಡ)
9 ಗೌಡನಭಾವಿ (ಸಾಮಾನ್ಯ ಮಹಿಳೆ)
10 ಕೋಳಬಾಳ (ಅನುಸೂಚಿತ ಜಾತಿ ಮಹಿಳೆ)
11 ಮೆದಿಕಿನಾಳ (ಸಾಮಾನ್ಯ)
12 ಹಡಗಲಿ (ಅನುಸೂಚಿತ ಜಾತಿ ಮಹಿಳೆ)
13 ಬೋಗಾಪೂರು (ಅನುಸೂಚಿತ ಪಂಗಡ ಮಹಿಳೆ)

 

Don`t copy text!