e-ಸುದ್ದಿ, ಮಸ್ಕಿ
ಶ್ರಮದಾನದಿಂದ ಏನನ್ನಾದರು ಸಾಧಿಸಬಹುದು ಎಂಬುದನ್ನು ಮಸ್ಕಿ ತಾಲೂಕಿನ ಉದ್ಬಾಳ ಗ್ರಾಮದ ಗ್ರಾಮಸ್ಥರು ಬುಧವಾರ ಸಾಧಿಸಿ ತೊರಿಸಿದ್ದಾರೆ.
ಉದ್ಬಳಾ ಗ್ರಾಮದಿಂದ ಹಸಮಕಲ್ ಗ್ರಾಮದವರೆಗಿನ 3.5 ಕೀ.ಮೀ ರಸ್ತೆಯನ್ನು ಗ್ರಾಮಸ್ಥರೇ ಹಣ ಹಾಕಿ ಶ್ರಮದಾನದಿಂದ ನಿರ್ಮಿಸುವ ಮೂಲಕ ಅಭಿವೃದ್ದಿ ಕೆಲಸಕ್ಕೆ ಹೊಸ ಭಾಷ್ಯೆ ಬರೆದಿದ್ದಾರೆ.
ಈ ಮೊದಲು ಎಚ್.ಕೆ.ಡಿ.ಬಿಯ ಮೈಕ್ರೋ ಯೋಜನೆಯಲ್ಲಿ ಈ ರಸ್ತೆ ನಿರ್ಮಾಣ ಮಾಡಲು ಸೇರ್ಪಡೆಯಗಿತ್ತು. ನಂತರ ಬದಲಾವಣೆ ಮಾಡಿ ಇದಕ್ಕೆ ಮೀಸಲಿದ್ದ ಹಣವನ್ನು ವಿಮಾನ ನಿಲ್ದಾಣದ ಕಾಮಗಾರಿಗಾಗಿ ವರ್ಗಾಹಿಸಲಾಗಿದೆ ಎಂದು ತಿಳಿದುಬಂದಿದೆ.
ಉದ್ಬಾಳ ಗ್ರಾಮದ ಮುಖಂಡರು, ಗ್ರಾ.ಪಂ.ಅಧ್ಯಕ್ಷರು, ಯುವಕರು ಶ್ರಮದಾನದ ಮುಖಾಂತರ ರಸ್ತೆ ನಿರ್ಮಾಣದ ಕುರಿತು ಚರ್ಚಿಸಿದರು. ಗ್ರಾಮದಲ್ಲಿದ್ದ ಪ್ರತಿಯೊಂದು ಮನೆಯವನ್ನು ಭೇಟಿ ಮಾಡಿ ಹಣದ ಸಹಕಾರ ಕೋರಿದ್ದಾರೆ. ಸುಮಾರು ನೂರಕ್ಕೂ ಹೆಚ್ಚು ಜನsÀ ಧನ ಸಹಾಯ ಮಾಡಿದರೇ ಉಳಿದವರು ತಮ್ಮಲ್ಲಿದ್ದ ಟ್ರ್ಯಾಕ್ಟರ್ ಉಚಿತವಾಗಿ ನೀಡಿ ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ.
ಈ ಮೊದಲಿದ್ದ ಕಚ್ಚಾ ರಸ್ತೆಯನ್ನು ಸಂಪೂರ್ಣವಾಗಿ ಸ್ವಚ್ಚಮಾಡಿ ಅಕ್ಕಪಕ್ಕದಲ್ಲಿ ಜಾಲಿಗಿಡಗಳನ್ನು ಕಡಿದು, ರಸ್ತೆಗೆ ಮರಮ್ ಹಾಕಿ ಗಟ್ಟಿಮುಟ್ಟಾದ ರಸ್ತೆ ನಿರ್ಮಾಣ ಮಾಡುವ ಮೂಲಕ ಉದ್ಬಾಳ ಗ್ರಾಮಸ್ಥರು ಇತರ ಗ್ರಾಮಗಳಿಗೆ ಮಾದರಿಯಾಗಿದ್ದಾರೆ.
ರುದ್ರಗೌಡ ಗೌಡುರು, ಅಜೇಯ ನಾಡಗೌಡ, ಶಂಕರರಾವ್ ಕುಲಕರ್ಣಿ, ಮಹಾಂತೇಶ ಕಡಾಮುಡಿಮಠ, ಯಂಕಣ್ಣ ಕಮತರ್, ಕಂಟೆಪ್ಪ ನಾಯಕ್, ಚಂದ್ರಶೇಖರ ನಾಯಕ್, ವೀರೇಶ ಕಮತರ್, ಗ್ರಾ.ಪಂ.ಅಧ್ಯಕ್ಷ ಅಂಬಂಣ್ಣ ಗೌಂಡಿ, ಅಮರೇಶ ಗೌಡರ್, ನೀಲಕಂಠಪ್ಪ ನಾಯಕ, ಬಸವರಾಜ ನಾಯಕ್ ಸೇರಿದಂತೆ ಅನೇಕರು ಶ್ರಮದಾನದಲ್ಲಿ ಭಾಗವಹಿಸಿದ್ದರು.
————————–
ಉದ್ಬಾಳ -ಹಸಮಕಲ್ ರಸ್ತೆ ಕಚ್ಚಾ ರಸ್ತೆ ಇತ್ತು. ಈ ರಸ್ತೆ ಮುಖಾಂತರ ಉದ್ಬಾಳ ಗ್ರಾಮಸ್ಥರು ತಮ್ಮ ಹೊಲಗಳಿಗೆ ಮತ್ತು ಹಸಮಕಲ್ ಮುಖಾಂತರ ಸಿಂಧನೂರಿಗೆ ಹೋಗುತ್ತಿದ್ದರು. ಮಳೆಗಾಲವಾದ್ದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಸರ್ಕಾರದ ಕಡೆ ಮುಖ ಮಾಡದೆ ಗ್ರಾಮಸ್ಥರ ನೆರವಿನಿಂದ ಶ್ರಮದಾನದ ಮುಖಾಂತರ ರಸ್ತೆ ನಿರ್ಮಾಣ ಮಾಡಿದ್ದೇವೆ.
–ವೀರೇಶ ಕಮತರ ಉದ್ಬಾಳ
———