ಸತ್ಯವ ಮಾರಲು

 

ಸತ್ಯವ ಮಾರಲು

ಸುಳ್ಳಿನ ಸಂತೆಯಲ್ಲಿ
ಸತ್ಯವ ಮಾರಲು ಹೊರಟೆ,
ಕೊಳ್ಳುವವರಿಲ್ಲಾ,ಕೇಳುವವರಿಲ್ಲಾ.

ಸುಳ್ಳಿನಾ ಸಿಹಿ ಲೇಪ,
ಸವಿಯುವರು ಎಲ್ಲಾ,
ಸತ್ಯಕ್ಕೆ ಕಹಿ ಸವರಿ,
ಮೋಜು ನೋಡುವರೆಲ್ಲಾ.

ಸತ್ಯವ ಹೊತ್ತು ,
ಸುತ್ತಿ ಘಾಸಿಗೊಂಡರು,
ಸುಳ್ಳಿನ ಹೊದಿಕೆಗೆ,
ಮರುಳಾಗಿಹರೆಲ್ಲಾ.

ಸತ್ಯವದು ಎಂದೆಂದೂ,
ಬೂದಿ ಮುಚ್ಚಿದ ಕೆಂಡ,
ಹೊಗೆಸೂಸಿ ಹೇಳುವುದು,
ತನ್ನ ಇರುವನು ಅಲ್ಲಿ.

ಸುಳ್ಳಿನ ಪಥವದು
ಕತ್ತಿಯ ಅಲಗಿನ ನಡೆಯು,
ತಪ್ಪಿದರೂ ಕೊಂಚವು,
ಮೃತ್ಯು ತಪ್ಪದು

🙏🏻 ಮಂಜುಶ್ರೀ ಬಸವರಾಜ ಹಾವಣ್ಣವರ 

Don`t copy text!