ಅನುಮತಿ ನೀಡು
ಸನಿಹಕ್ಕೆ ಬರಲು
ಅನುಮತಿ ನೀಡು
ಹೃದಯವೇ ನೋಡು
ನನ್ನ ಈ ಪಾಡು
ಹೊಸಬೆಳಕಿನ ಕನಸು
ಪರವಶಗೊಂಡ ಮನಸು
ಹಿಡಿಯಷ್ಟು ಬದುಕು
ಹಿಡಿ ಪ್ರೀತಿ ನೀಡು
ಪ್ರತಿಕ್ಷಣ ತವಕದ
ಗುಣ ಎಂಥ ಅದ್ಭುತ
ಇಣುಕಿ ಒಮ್ಮೆ ನೋಡು
ನನ್ನ ಈ ಹೃದಯ ಗೂಡು
ಉಸಿರು ಉಸಿರಿನಲ್ಲಿ
ನಿನ್ನ ನೆನಪು
ಜಪಿಸೋ ನಾನು
ಹೋಲಿಕೆ ಕೊಡಲಾರೆ
ಯಾರಿಗೂ ನಿನ್ನ ಇನ್ನು
ಸಂಜೆ ಮುಸ್ಸಂಜೆ
ಬಣ್ಣಗಳ ಸಂತೆ
ಕನಸು ಭಾವಗಳ ಕಂತೆ
ಸ್ನೇಹದ ಕನಸು ಬಿತ್ತಿ
ಒಲುಮೆ ಪ್ರೀತಿಯ
ಸ್ನೇಹದ ಅಚ್ಚು ಒತ್ತಿ
ನೀ ನನ್ನ ಬಳಿ ನಿಂತೆ..
ನಿರವ ಮೌನ ಶಾಂತೇ
–ಪ್ರೊ ವಿಜಯಲಕ್ಷ್ಮೀ ಪುಟ್ಟಿ