ಶಾಲ ಹಂತದಲ್ಲಿ ಪರಿಸರ ಜಾಗೃತಿ ಅಗತ್ಯ-ಮಲ್ಲಿಕಾ ಹಿರೇಮಠ

e-ಸುದ್ದಿ, ಮಸ್ಕಿ
ಬಿಸಲಿನ ತಾಪಮಾನ ಕಡಿಮೆ ಮಾಡಲು ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಮರಗಳನ್ನು ಬೆಳಸುವುದು ಅವಶ್ಯಕವಾಗಿದ್ದು ಮಕ್ಕಳಲ್ಲಿ ಶಾಲ ಹಂತದಲ್ಲಿ ಪರಿಸರ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ವಲಯ ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾ ಹಿರೇಮಠ ಹೇಳಿದರು.
ತಾಲೂಕಿನ ಬಳಗಾನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕರೊನಾ ಸಂದರ್ಭದಲ್ಲಿ ಆಮ್ಲಜನಕವನ್ನು ಹಣ ಕೊಟ್ಟು ಖರೀಧಿಸುವ ಸಂದರ್ಭ ಬಂದಾಗಲು ನಾವು ಎಚ್ಚತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಗಂಬೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪರಿಸರ ಉಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಪ್ರಕೃತಿ ಫೌಂಡೇಶನ್ ಮಾಡುತ್ತಿದೆ ಎಂದು ಪ್ರಕೃತಿ ಫೌಂಡೇಶನದ ಅಧ್ಯಕ್ಷ ಶಿವಕುಮಾರ ತಿಳಿಸಿದರು.
ಪಿಎಎಸ್‍ಐ ಸಿದ್ದಲಿಂಗಯ್ಯ ಹಿರೇಮಠ, ಮುಖ್ಯಗುರು ಮಹಾದೇವಮ್ಮ, ಹನುಮೇಶ ನಾಯಕ್, ರೆಡ್ಡಪ್ಪ, ಗುಂಡಪ್ಪ ವಿಶ್ವಕರ್ಮ, ಶಿವಕುಮಾರ ಗಡ್ಡಿ, ಬಸವರಾಜ ಗಬ್ಬೂರು ಹಾಗೂ ಇತರರು ಭಾಗವಹಿಸಿದ್ದರು.

Don`t copy text!