e-ಸುದ್ದಿ, ಮಸ್ಕಿ
ದಿನದಿಂದ ದಿನಕ್ಕೆ ತೈಲ್ ಬೆಲೆ ಗಗನಕ್ಕೇರುತ್ತಿವೆ. ಇದರಿಂದಾಗಿ ಸರ್ವಾಜನಿಕರ ಬದುಕು ಮುರಾಬಟ್ಟೆಯಾಗಿ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದು ಭೀಮ ಆರ್ಮಿ ಸಂಘಟನೆಯ ತಾಲೂಕು ಅಧ್ಯಕ್ಷ ಗಂಗಾಧರ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಗಾಂಧಿ ಪ್ರತಿಮೆಯಿಂದ ತಹಸೀಲ್ದಾರ ಕಚೇರಿ ವರೆಗೆ ಭೀಮ ಆರ್ಮಿ ಸಂಘಟನೆಯ ಪದಾಧಿಕಾರಿಗಳು ಜಾಥ ನಡೆಸಿ ಪ್ರತಿಭಟನೆ ಮಾಡಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತೇಲ ಬೆಲೆ ಹೆಚ್ಚಳ ಮಾಡುತ್ತಿದ್ದು ಕಾರ್ಪೋರೇಟ ಕಂಪನಿಗಳ ಪರವಾದ ಸರ್ಕಾರ ನಡೆಸುತ್ತಿದುದ್ದು ಬಡವರ ಹಿತ ಕಾಯುವದನ್ನು ಬಿಟ್ಟು ಅಂಬಾನಿ ಅದಾನಿ ಹಿತ ಕಾಯುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ರೈತರನ್ನು ಕಡೆಗಣಿಸುತ್ತಿದ್ದು ರೈತರಿಗೆ ಮಾರಕವಾಗುವ ಕಾನೂನು ತಂದಿದ್ದಾರೆ. ಕೂಡಲೇ ಹಿಂಪಡೆದು ತೈಲ ಬೆಲೆ ಇಳಿಸಬೇಕೆಂದು ಒತ್ತಾಯಿಸಿದರು.
ತಹಸೀಲ್ದಾರ ಕವಿತಾ ಆರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಗಂಗಪ್ಪ ತೊರಣದಿನ್ನಿ, ಚಾಂದ್ ಸಾಬ ಬೆಳ್ಳಿಗನೂರು, ದೇವರಾಜ ಮಡಿವಾಳ, ಬಸವರಾಜ ಹಿರೇದಿನ್ನಿ, ರಾಮಣ್ಣ ಪೇಂಟರ್, ಶರಣಪ್ಪ ಬಳಾಗನೂರು, ಸುಖಪ್ಪ ಬೆಳ್ಳಿಗನೂರು ಹಾಗೂ ಇತರರು ಭಾಗವಹಿಸಿದ್ದರು.