ಪರಮ‌ ಪಂಚಾಕ್ಷರ ಪುಟ್ಟರಾಜ

ಪರಮ‌ ಪಂಚಾಕ್ಷರ ಪುಟ್ಟರಾಜ

ಹರನೆ ನೀನು ಗುರುವೇ ನೀನು
ಧರೆಗೆ ಬಂದ ಶಿವನು ನೀನು

ಸಂಗೀತ ಸಾಮ್ರಾಜ್ಯನು ನೀನು
ಗಾನಯೋಗಿ ಗುರುವೇ ನೀನು

ಶರಣ ಶರಣು ಶರಣು ಗುರುವೆ
ಪರಮ ಪಾದ ತೋರೊ ಗುರವೆ

ಸ್ಮರಣೆ ಮಾಡಿ ನಿನ್ನ ನಾನು
ಪಾವನಾದೆ ನಾನು ಗುರುವೇ

ಗುರು ಪಂಚಾಕ್ಷರ ಪುಟ್ಟರಾಜ
ಕಲ್ಲೇಶರ ಸ್ವಾಮಿ ಗುರುವೇ

ಶರಣೆಂದು ಬಂದ ಜನಕೆ ನೀನು
ವರವ ಕೊಡುವ ಗುರವೇ ನೀನು

ಗದುಗ ಗದ್ದಿಗೆಯ ಮಾಡಿದ ಪಂಚಾಕ್ಷರ ಪುಟ್ಟರಾಜ ಗುರುವೆ

ಶರಣು ಶರಣು ಶರಣು ಗುರುವೆ
ಕರುಣದಿಂದ ಕಾಯೋ ನೀನು

ಶಾಂತನ ಮನದಿ ಬಂದು ಸಂತ ನೀನಾದೆ ಗುರುವೇ ನಿಮಗೆ

ನಮೋ‌ ನಮೋ

ಶಾಂತಪ್ಪ ಬೆಲ್ಲದ ಕೊಪ್ಪಳ

Don`t copy text!