ಬಕ್ರೀದ್ ಹಬ್ಬ ಶಾಂತಿ ಸುವ್ಯೆವಸ್ಥೆಯ ಆಚರಿಸಲು ಸಿಪಿಐ ದೀಪಕ್ ಬೂಸರಡ್ಡಿ ಕರೆ

e-ಸುದ್ದಿ, ಮಸ್ಕಿ
ಬಕ್ರೀದ್ ಹಬ್ಬವನ್ನು ಶಾಂತಿ ಸುವ್ಯೆವಸ್ಥೆಯಿಂದ ಆಚರಿಸುವಂತೆ ಸಿಪಿಐ ದೀಪಕ್ ಬೂಸರಡ್ಡಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಭಾನುವಾರ ಗ್ರಾಮದ ಮುಖಂಡರ ಶಾಂತಿ ಸಭೆಯಲ್ಲಿ ಮಾತನಾಡಿದರು. ಕರೊನಾ ಎರಡನೇ ಅಲೆ ತಾತ್ಕಲಿಕವಾಗಿ ಕಡಿಮೆಯಾಗಿದ್ದರು ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಹಾಗಾಗಿ ಸರ್ಕಾರ ಕೊವಿಡ್ ನಿಯಮದಂತೆ ಹಬ್ಬ ಆಚರಿಸಲು ಸೂಚಿಸಿದೆ. ಸರ್ಕಾರದ ನಿಯಮದಂತೆ ಹಬ್ಬ ಆಚರಿಸಲು ಮನವಿ ಮಾಡಿದರು.
ಮುಸ್ಲಿಂ ಸಮಾಜದ ಮುಖಂಡ ಹಾಗೂ ಪತ್ರಕರ್ತ ಅಬ್ದುಲ್ ಅಜೀಜ್ ಮಾತನಾಡಿ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಕೊವಿಡ್ ನಿಯಮದಂತೆ ಮಸೀದಿಗಳಲ್ಲಿ ಸರಳವಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಅಪ್ಪಾಜಿಗೌಡ ಪಾಟೀಲ ಮಾತನಾಡಿ ಮಸ್ಕಿ ಪಟ್ಟಣ ಶಾಂತಿ ಮತ್ತು ಸಹೋದರತ್ವಕ್ಕೆ ಹೆಸರುವಾಸಿಯಾದ ಗ್ರಾಮ. ಈ ಗ್ರಾಮದಲ್ಲಿ ಹಿಂದೂಗಳು ಮತ್ತು ಮುಸ್ಲಿಂರು ಅಣ್ಣ ತಮ್ಮಂದಿರಂತೆ ಜೀವಿಸುತ್ತಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯುವುದಿಲ್ಲ. ಕರೊನಾ ಹಿನ್ನಲೆಯಲ್ಲಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅಡೆತಡೆ ಆಗಿದ್ದು ಆರೋಗ್ಯ ಕಾಪಾಡಿಕೊಳ್ಳುವದು ಮುಖ್ಯವಾಗಿರುವದರಿಂದ ಸರಳವಾಗಿ ಆಚರಿಸುವಂತೆ ತಿಳಿಸಿದರು.
ಪಿಎಸ್‍ಐ ಭೀಮದಾಸ್ ಕರೊನಾ ನಿಯಾಮವಳಿಗಳನ್ನು ತಿಳಿಸಿ ಕಡ್ಡಾಯವಾಗಿ ಪಾಲಿಸುವಂತೆ ಹೇಳಿದರು.
ಮುಖಂಡರಾದ ಅಬ್ದುಲ್ ಗನಿಸಾಬ್, ಜಿಲಾನಿ ಖಾಜಿ, ಪುರಸಭೆಯ ಮಾಜಿ ಅಧ್ಯಕ್ಷ ಮೌನೇಶ ಮುರಾರಿ, ಅಬ್ದುಲ್ ರಜಾಕ್, ಮಸೂದ್ ಪಾಷ್. ಅಶೋಕ ಮುರಾರಿ, ಸಂತೋಷ ಹಿರೇದಿನ್ನಿ ಹಾಗೂ ಇತರರು ಭಾಗವಹಿಸಿದ್ದರು.

Don`t copy text!