ಸೃಷ್ಠಿಯ ಕೊಡುಗೆ
ಕ್ರಮಬದ್ದವಾಗಿ ತಿರುಗುತಿರುವ ಈ ಭೂಗೋಳವು
ಅಸಂಖ್ಯ ಜೀವಿಗಳಾಶ್ರಯದ ಮನಸೂರೆಗೂಳಿಸುವ ತಾಣವು
ಸೂರ್ಯ ಚಂದ್ರ ನಕ್ಷತ್ರಾದಿಗಳು ಮೆರಗು ನೀಡಿವೆ
ದಣಿದ ಜೀವಿಗಳಿಗೆ ಮತ್ತೆ ಹೊಸತನ ತುಂಬಿವೆ
ಗಿಡ ಮರ ಬಳ್ಳಿಗಳು ಪ್ರಾಣಕಾಪಾಡಿವೆ
ಪಶು ಪಕ್ಷಿಗಳು ಆನಂದ ಉಂಟು ಮಾಡಿವೆೆ
ಜಲಪಾತಗಳು ಭೋರ್ಗರೆದು ಧುಮ್ಮುಕ್ಕಿ ತನು ಮನ ಸೆಳೆದಿವೆ
ಕಾಣದ ಕೈ ಸೋಲದೆ ಜಗವ ತೂಗುತಿರಲು
ನಮ್ಮದೇನಿಲ್ಲ ಇಲ್ಲಿ ಕೇವಲ ಧರ್ಮಕಾಯಕವೊಂದಿರಲು
ಕನಸುಗಳು ಎಂದೂ ಬಾಡದಿರಲಿ
ಪರಮಾತ್ಮನ ಕೃಪೆ ಎಲ್ಲರಮೇಲಿರಲಿ
ಮಹಾತ್ಮರು ಸಾಧುಸಂತರನೇಕರು ಜ್ಞಾನ ಜ್ಯೋತಿಹಚ್ಚಿದರಿಲ್ಲಿ
ಮುನ್ನಡೆಯಬೇಕಿದೆ ಭಗವಂತನ ಸ್ಮರಿಸುತ ಹೃದಯದಲ್ಲಿ.
–ಶ್ರೀಕಾಂತ ಅಮಾತಿ
ಕಲ್ಯಾಣ (ಪಶ್ಚಿಮ)