e-ಸುದ್ದಿ, ಮಸ್ಕಿ
ಪಟ್ಟಣದ ಗಚ್ಚಿನ ಹಿರೇಮಠದ ಕಾಂಪ್ಲೇಕ್ಸ್‍ನಲ್ಲಿರುವ ಕಿರಣ ಮೂಬೈಲ ಅಂಗಡಿಯಲ್ಲಿ ಬುಧವಾರ ಬೆಳಗಿನ ಜಾವ ಕಳ್ಳತನ ನಡೆದಿದೆ.
ಅಂಗಡಿಯಲ್ಲಿದ್ದ 15 ಸಾವಿರ ರೂ. ಹಾಗೂ ಅಂದಾಜು 10 ಲಕ್ಷ ರೂ ಮೌಲ್ಯದ ವಿವಿಧ ಕಂಪನಿಯ ಸ್ಮಾರ್ಟ್ ಮೊಬೈಲ ಪೋನ್‍ಗಳನ್ನು ಕಳ್ಳತನ ಮಾಡಲಾಗಿದೆ.
ಅಂಗಡಿಯಲ್ಲಿದ್ದ ಸಿಸಿ ಕ್ಯಾಮೆರಾ ಇದ್ದರೂ ಅದರ ವೈಯರ್ ಕಡಿತ ಮಾಡಿ ಸಿಸಿ ಟಿವಿ ಸಹಿತವಾಗಿ ಕಳ್ಳತನ ಮಾಡಲಾಗಿದೆ. ಘಟನೆ ಕುರಿತು ಮಸ್ಕಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..