ಮೊದಲು ಪ್ರವಾಹ ಪರಸ್ಥಿತಿ ಅವಲೊಕನ

ಮೊದಲು ಪ್ರವಾಹ ಪರಸ್ಥಿತಿ ಅವಲೊಕನ

ನಂತರ ಆಡಳಿತಕ್ಕೆ ಚುರುಕು- ಬಸವರಾಜ ಬೊಮ್ಮಾಯಿ

e-ಸುದ್ದಿ ಬೆಂಗಳೂರು 

ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಕಾರವಾರ ಜಿಲ್ಲೆಗೆ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿ ಅವಲೋಕಿಸುವುದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,  ಉತ್ತರ ಕನ್ನಡ ಜಿಲ್ಲೆಗೆ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ತೆರಳಿದ್ದೇನೆ. ಬಳಿಕ ವಾಪಸ್ ಬಂದ ನಂತರ ಬೆಂಗಳೂರಿನಲ್ಲಿ ಕುಳಿತು ಎಲ್ಲ ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ಪರಿಶೀಲಿಸುತ್ತೇನೆ ಎಂದು ತಿಳಿಸಿದರು.

ಇನ್ನು ಮುಂದೆ ಅಧಿಕಾರಿಗಳಿಗೆ ಏನು ಮಾಡಿದರೂ ನಡೆಯುತ್ತದೆ ಎನ್ನುವ ಮನೋಭಾವನೆ ಬೇಡ.  2 ದಿನದಲ್ಲಿ ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಫೈಲ್ ಬಾಕಿ ಉಳಿದುಕೊಂಡಿವೆ ಎನ್ನುವ ಮಾಹಿತಿ ನೀಡಬೇಕು ಎಂದು ಕೇಳಿದ್ದೇನೆ. 15 ದಿನದಲ್ಲಿ ಪೆಂಡಿಂಗ್ ಫೈಲ್ ಗಳನ್ನು ಕ್ಲಿಯರ್ ಮಾಡಬೇಕು ಎಂದರು.

ನಾನು ಸಿಎಂ ಅವಧಿಯಲ್ಲಿ ರಾಜ್ಯದ ಬಡಜನರ ಪರವಾಗಿ ಕೆಲಸ ಮಾಡುತ್ತೇನೆ. ಜನಪರ ಆಡಳಿತ ನಡೆಸೋದೇ ನನ್ನ  ಉದ್ದೇಶವಾಗಿದೆ ಅಂತಾ ವಿಶ್ವಾಸ ವ್ಯಕ್ತ ಪಡಿಸಿದರು. ಕೊರೊನಾ, ಪ್ರವಾಹ ನಿಯಂತ್ರಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.

Don`t copy text!